ತುಮಕೂರು; ಕೊರಟಗೆರೆ ತಾಲ್ಲೂಕು ಮಲ್ಲಪ್ಪನಹಳ್ಳಿ ನದಿಯಲ್ಲಿ ವಾಹನವೊಂದು ಕೊಚ್ಚಿಹೋಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಚುರುಕುಗೊಂಡಿದೆ. ಇದೀಗ ನದಿ ನೀರಿನಲ್ಲಿ ಕೊಚ್ಚಿಹೋದ ವಾಹನ ಪತ್ತೆಯಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ವಾಹನವನ್ನು ಮೇಲೆ ತಂದಿದ್ದಾರೆ. ಇನ್ನು ಚಾಲಕ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.