CinemaNational

ಬಿಂದಾಸ್‌ ನಟಿ ಹನ್ಸಿಕಾಗೆ ಡಿಸೆಂಬರ್‌ನಲ್ಲಿ ಮದುವೆ

ಮುಂಬೈ; ಬಿಂದಾಸ್‌ ಚಿತ್ರದಲ್ಲಿ ಪುನೀತ್‌ ಜೊತೆ ನಟಿಸಿದ್ದ ಹನ್ಸಿಕಾ ಮೊಟ್ವಾನಿ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಹನ್ಸಿಕಾ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ರಾಜಸ್ಥಾನದ ಜೈ‍ಪುರದ ಮುಂದೋಟಾ ಕೋಟೆ ಹಾಗೂ ಅರಮನೆಯಲ್ಲಿ ಹನ್ಸಿಕಾ ಮದುವೆ ಸಮಾರಂಭ ನಡೆಯಲಿದೆ. ಈಗಾಗಲೇ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ ದಕ್ಷಿಣ ಭಾರತದ ಖ್ಯಾತ ರಾಜಕಾರಣಿಯ ಕುಟುಂಬದ ಹುಡುಗನನ್ನು ಹನ್ಸಿಕಾ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಇನ್ನೂ ಹುಡುಗನ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Share Post