BengaluruCinemaSports

ಚಲನಚಿತ್ರ ಕಪ್‌ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟನೆಗೆ ಸಚಿನ್‌, ಧೋನಿ

ಬೆಂಗಳೂರು; ಕನ್ನಡ ಚಲನಚಿತ್ರ ಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಪ್ರತಿವರ್ಷದಂತೆ ಈ ವರ್ಷವೂ ಆಯೋಜನೆ ಮಅಅಡಲಾಗಿದ್ದು, ಇದರ ಉದ್ಘಾಟನೆಗೆ ಎಂ.ಎಸ್‌.ಧೋನಿ ಹಾಗೂ ಸಚಿನ್‌ ತೆಂಡೂಲ್ಕರ್‌ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. 

ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಈ ಪಂದ್ಯಾವಳಿ ನಡೆಯಲಿದೆ.  ಹಲವಾರು ವರ್ಷಗಳಿಂದ ಈ ಪಂದ್ಯಾವಳಿ ನಡೆಸುತ್ತಾ ಬರಲಾಗುತ್ತಿದೆ. ಒಮ್ಮೆ ಹುಬ್ಬಳ್ಳಿಯಲ್ಲೂ ಈ ಪಂದ್ಯಾವಳಿ ನಡೆಸಲಾಗಿತ್ತು. ಕನ್ನಡ ಸಿನಿಮಾ ರಂಗದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಈ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.

ನಟರು ತಮ್ಮದೇ ತಂಡಗಳನ್ನು ಕಟ್ಟಿಕೊಂಡು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಉದ್ಘಾಟನೆಗೆ ಸಚಿನ್‌ ಹಾಗೂ ಧೋನಿ ಬರುತ್ತಿರುವುದರಿಂದ ಈ ಪಂದ್ಯಾವಳಿಗೆ ಮತ್ತಷ್ಟು ಮೆರುಗು ಬಂದಂತಾಗಿದೆ.

 

Share Post