ನಟ ದುನಿಯಾ ವಿಜಯ್‌ಗೆ ಕೋರ್ಟ್‌ನಲ್ಲಿ ಹಿನ್ನಡೆ; ವಿಚ್ಛೇದನದ ಅರ್ಜಿ ವಜಾ!
ಬೆಂಗಳೂರು; ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಚೇದನ ಕೋರಿದ್ದ ನಟ ದುನಿಯಾ ವಿಜಯ್‌ಗೆ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.. ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್ ದುನಿಯಾ ವಿಜಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.. ದುನಿಯಾ ವಿಜಯ್ ಅವರು ನಾಗರತ್ನ ಅವರ ವಿರುದ್ಧ ಮಾಡಿದ್ದ ಆರೋಪಗಳನ್ನು ಸಾಬೀತುಪಡಿಸಲು ಆಗಿಲ್ಲ.. ಈ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಲಾಗಿದೆ..
2018ರಲ್ಲಿ ದುನಿಯಾ ವಿಜಯ್ ಅವರು ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು.. ಆದ್ರೆ ನಾಗರತ್ನ ಅವರು ಗಂಡನನ್ನು ಬಿಡಲು ಒಪ್ಪಿರಲಿಲ್ಲ.. ಹೀಗಿರುವಾಗಲೇ ಇಂದು ಕೋರ್ಟ್ ಆದೇಶ ನೀಡಲು ಸಮಯ ನಿಗದಿ ಮಾಡಿತ್ತು.. ಈ ಬಗ್ಗೆ ಎಲ್ಲರ ಕುತೂಹಲ ಹೆಚ್ಚಾಗಿತ್ತು.. ಇಂದು ಕೋರ್ಟ್ ದುನಿಯಾ ವಿಜಯ್ ಅರ್ಜಿಯನ್ನು ವಜಾ ಮಾಡಿದೆ..