ಸಲ್ಮಾನ್ ಖಾನ್ ಮನೆ ಬಳಿ ಗುಂಡು ಹಾರಿಸಿದ್ದ ಆರೋಪಿ ಜೈಲಲ್ಲಿ ಆತ್ಮಹತ್ಯೆ!
ಮುಂಬೈ; ಏಪ್ರಿಲ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಮುಂದೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು.. ಅನಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.. ಇದರಲ್ಲಿ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
32 ವರ್ಷದ ಅನುಜ್ ಥಾಪನ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಆರೋಪಿಯಾಗಿದ್ದಾನೆ.. ಈತ ಪಂಜಾಬ್ ಮೂಲದವನಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದ.. ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿ ಶೌಚಾಲಯಕ್ಕೆ ತೆರಳಿದ್ದ.. ಈ ವೇಳೆ ಆತ ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ..
ನಟ ಸಲ್ಮಾನ್ ಖಾನ್‌ಗೆ ಆಗಾಗ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು.. ಈ ಬೆನ್ನಲ್ಲೇ ಇಬ್ಬರು ವ್ಯಕ್ತಿಗಳು ಏಪ್ರಿಲ್ 14ರಂದು ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಏಪ್ರಿಲ್ 26ರಂದು ಅನುಜ್ ಥಾಪನ್ ಹಾಗೂ ಸೋನು ಸುಭಾಷ್ ಚಂದರರ್ ಎಂಬುವವರನ್ನು ಬಂಧಿಸಿದ್ದರು.. ಇದರಲ್ಲಿ ಅನುಜ್ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
4 ರಿಂದ 5 ಜನ ಕಾವಲಿರೋ ಕಸ್ಟಡಿಯಲ್ಲಿ 10 ಕೈದಿಗಳೊಂದಿಗೆ ಅನುಜ್ ಥಾಪನ್ನನ್ನ ಇರಿಸಲಾಗಿತ್ತು.. ಇದರ ನಡುವೆಯೂ ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ..