ಮದುವೆಯಾದ ಒಂದೇ ತಿಂಗಳಿಗೆ ಇನ್ಫೋಸಿಸ್ ಉದ್ಯೋಗಿ ನೇಣಿಗೆ ಶರಣು; ಹಲವು ಅನುಮಾನ!
ಕೋಲಾರ; ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.. ಬೆಳಗಿನ ಜಾವ ಕೆಲಸ ಮುಗಿಸಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದೆ..
ಕೋಲಾರದ ಅರಾಭಿಕೊತ್ತನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.. 28 ವರ್ಷದ ಹರೀಶ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನು.. ಹರೀಶ್‌ಗೆ ಒಂದು ತಿಂಗಳ ಹಿಂದೆಯಷ್ಟೇ ದೇವನಹಳ್ಳಿ ಮೂಲದ ಯುವತಿ ಜೊತೆ ವಿವಾಹವಾಗಿತ್ತು.. ಆದ್ರೆ ಅದೇನಾಯ್ತೋ ಏನೋ ಹರೀಶ್ ಇದ್ದಕ್ಕಿದ್ದಂತೆ ನೇಣಿಗೆ ಕೊರಳೊಡ್ಡಿದ್ದಾನೆ..
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ..