ಹಣ ಉಳಿತಾಯ ಮಾಡುವವರಿಗೆ ರಾತ್ರಿ ಕಣ್ತುಂಬ ನಿದ್ದೆ ಬರುತ್ತಂತೆ..!
ಬೆಂಗಳೂರು; ಪ್ರತಿ ತಿಂಗಳೂ ಸ್ವಲ್ಪವಾದರೂ ಹಣ ಉಳಿತಾಯ ಮಾಡುವವರು ರಾತ್ರಿ ವೇಳೆ ಚೆನ್ನಾಗಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಾರಂತೆ.. ಹೀಗಂತ ಬ್ರಿಸ್ಟಲ್ ಯೂನಿವರ್ಸಿಟಿ ಅಧ್ಯಯನದಿಂದ ತಿಳಿದುಬಂದಿದೆ..
ಪ್ರತಿ ತಿಂಗಳ ಸ್ವಲ್ಪವಾದರೂ ಹಣ ಉಳಿತಾಯ ಮಾಡಬೇಕು. ಹಾಗೆ ಮಾಡುವುದರಿಂದ ಭವಿಷ್ಯತ್ತಿನ ಮೇಲೆ ಭರವಸೆ ಮೂಡುತ್ತದೆ.. ಬದುಕಿನ ಮೇಲೆ ಭರವಸೆ ಮೂಡಿದರೆ ಅವರಿಗೆ ಚೆನ್ನಾಗಿ ನಿದ್ರೆ ಬರುತ್ತದೆ. ಹೀಗಂತ ಬ್ರಿಸ್ಟಲ್ ಯೂನಿವರ್ಸಿಟಿ ಅಧ್ಯಯನ ತಂಡ ಹೇಳಿದೆ..
ಯಾಕ್ಟ್ ಆಫ್ ಸೇವಿಂಗ್ಸ್ ವಿಚಾರದ ಮೇಲೆ ಈ ಸಂಶೋಧನೆ ಮಾಡಿದ್ದಾರೆ.. ಇದರ ಪ್ರಕಾರ, ಸೇವಿಂಗ್ಸ್‌ಗೂ ಸ್ಲೀಪಿಂಗ್‌ಗೂ ಸಂಬಂಧ ಇದೆ ಅನ್ನೋ ವಿಚಾರ ತಿಳಿದುಬಂದಿದೆ.. ಪ್ರತಿ ತಿಂಗಳೂ ಉಳಿತಾಯ ಮಾಡುವವರಲ್ಲಿ ಒಂದೇ ರೀತಿಯ ಸಂತೃಪ್ತಿ ಭಾವ ಇರುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿದೆ..