BengaluruCrime

ಶಾಲೆ ಕಾಂಪೌಂಡ್‌, ರಸ್ತೆ ಮೇಲೆಲ್ಲಾ SORRY ಬರಹ; ಏನಿದು ಹಚ್ಚಾಟ..?

ಬೆಂಗಳೂರು; ಸುಂಕದ ಕಟ್ಟೆಯ ಶಾಂತಿಧಾಮ ಶಾಲೆ ರಸ್ತೆಯಲ್ಲಿ ಬೆಳಗ್ಗೆ ಎಲ್ಲರಿಗೂ SORRY ಸ್ವಾಗತ ಸಿಕ್ಕಿತ್ತು. ಎಲ್ಲಿ ನೋಡಿದರೂ SORRY ಎಂದು ಬರೆಯಲಾಗಿತ್ತು. ಶಾಂತಿಧಾಮ ಶಾಲೆಯ ಕಾಂಪೌಂಡ್‌ ಗೋಡೆ, ಮೆಟ್ಟಿಲು, ರಸ್ತೆಯುದ್ಧಕ್ಕೂ ಕೆಂಪು ಬಣ್ಣದಲ್ಲಿ SORRY ಎಂದು ಬರೆದಿರುವುದು ಕಂಡುಬಂತು. ಇದನ್ನು ನೋಡಿ ಸ್ಥಳೀಯರಿಗೆ ಅಚ್ಚರಿ ಮೂಡಿಸಿತ್ತು.

 

ಅಂದಹಾಗೆ ಇದನ್ನು ಯಾರು ಬರೆದರು, ಯಾಕೆ ಬರೆದರು ಅನ್ನೋದೇ ಗೊತ್ತಾಗುತ್ತಿಲ್ಲ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಪೊಲೀಸರು ಈ ಬಗ್ಗೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ರಸ್ತೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ಫುಡ್‌ ಡೆಲಿವರಿ ಬ್ಯಾಗ್‌ ನೊಂದಿಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಯುವಕರು ಈ ರೀತಿ ಬರೆದುಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಫುಡ್‌ ಡೆಲಿವರಿ ಹುಡುಗರು ರಾತ್ರಿ ಈ ರಸ್ತೆಯಲ್ಲಿ ಓಡಾಡಿರುವ ದೃಶ್ಯ ಸಿಕ್ಕಿದ್ದು, ಅದರ ಆಧಾರದ ಮೇಲೆ ಅವರನ್ನು ಹಿಡಿಯಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕೆಂಪು ಬಣ್ಣ ಸ್ಪ್ರೇ ತಂದು ಅದ್ರಲ್ಲಿ ಎಲ್ಲೆಡೆ SORRY ಎಂದು ಬರೆಯಲಾಗಿದೆ. ಪ್ರೀತಿ ವಿಚಾರದಲ್ಲಿ ಜಗಳವಾಗಿ ಈ ರೀತಿ ಬರೆದಿರಬಹುದು ಎಂದು ಹೇಳಲಾಗುತ್ತಿದೆ. ಆದ್ರೆ, ಅದನ್ನು ಬರೆದವರು ಸಿಕ್ಕಿದ ಮೇಲೆಯೇ ನಿಜ ವಿಚಾರ ಗೊತ್ತಾಗೋದು.

Share Post