BengaluruPolitics

ಬಿಜೆಪಿಯ ಸಂಭಾವ್ಯರ ಪಟ್ಟಿ ರೆಡಿ; ದೆಹಲಿಯತ್ತ ಸಿಎಂ ಬೊಮ್ಮಾಯಿ

ಬೆಂಗಳೂರು; ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈಗಾಗಲೇ ತಮ್ಮ ಅಭ್ಯರ್ಥಿಗಳ ಪಟ್ಟಿಗಳನ್ನು ರಿಲೀಸ್‌ ಮಾಡಿವೆ. ಆದ್ರೆ ಬಿಜೆಪಿ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಇದೀಗ ರಾಜ್ಯ ನಾಯಕರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಿದ್ದಾರೆ. ಅದನ್ನು ಹೈಕಮಾಂಡ್‌ಗೆ ನೀಡಲಾಗುತ್ತದೆ. ಹೈಕಮಾಂಡ್‌ ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಒಂದು ಕ್ಷೇತ್ರಕ್ಕೆ ಮೂವರು ಹೆಸರುಗಳನ್ನು ಸೂಚಿಸಿ ಪಟ್ಟಿ ಸಿದ್ಧ ಮಾಡಲಾಗಿದೆ. ಆ ಪಟ್ಟಿಯೊಂದಿಗೆ ಸಿಎಂ ಬೊಮ್ಮಾಯಿವರು ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್‌ಗೆ ಪಟ್ಟಿ ತಲುಪಿಸಿ, ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಾಜ್ಯ ನಾಯಕರು ಸಂಭಾವ್ಯರ ಪಟ್ಟಿ ಕೊಟ್ಟಿದ್ದರೂ ಬಿಜೆಪಿಯಲ್ಲಿ ಹೈಕಮಾಂಡ್‌ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುತ್ತದೆ. ಪಟ್ಟಿಯಲ್ಲಿಲ್ಲದ ಹೆಸರುಗಳನ್ನು ಸೇರಿಸಿ ಪಟ್ಟಿ ರಿಲೀಸ್‌ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಹೈಕಮಾಂಡ್‌ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ.

Share Post