Bengaluru

ವಿಶ್ವಪರಿಸರ ದಿನ; ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕ್ಲಾಸ್‌

ಬೆಂಗಳೂರು; ವಿಶ್ವ ಪರಿಸರ ದಿನಾಚರಣೆಯಂದೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅರಣ್ಯಾಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಬ್ಯಾರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಥಣಿಸಂದ್ರದ ಬಳಿಯ ರಾಚೇನಹಳ್ಳಿ ಕೆರೆ ಬಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಬಿಎಂಪಿ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಕೃಷ್ಣಬೈರೇಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ಪಾರ್ಕ್‌ ಮಧ್ಯದಲ್ಲಿ ಗಿಡ ನೆಡಿಸಿದ್ದಕ್ಕೆ ಡಿ.ಕೆ.ಶಿವಕುಮಾರ್‌ ಸಿಟ್ಟಿಗೆದ್ದರು, ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಬೇಡಿ ಎಂದು ಬಿಬಿಎಂಪಿ ಮಹಿಳಾ ಅಧಿಕಾರಿಗೆ ಕ್ಲಾಸ್‌ ತೆಗೆದುಕೊಂಡರು.

ಸಚಿವರಿಬ್ಬರ ಕೈಯಲ್ಲೂ ಗಿಡ ನೆಡಿಸಲಾಯಿತು. ಆದ್ರೆ ಈ ಗಿಡಗಳನ್ನು ಪಾರ್ಕ್‌ ಮಧ್ಯದಲ್ಲಿ ನಡೆಸಲಾಗಿತ್ತು. ಇದರಿಂದಾಗಿ ಡಿಕೆಶಿ ಆಕ್ರೋಶ ಗೊಂಡಿದ್ದರು. ಎಲ್ಲಿ ಗಡಿ ನೆಡಬೇಕು ಎಂಬುದರ ಬಗ್ಗೆ ಕಾಮನ್‌ ಸೆನ್ಸ್‌ ಇರಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪಾರ್ಕ್ ನಲ್ಲಿ ಚೆನ್ನಾಗಿರುವ ಜಾಗದಲ್ಲಿ ಗಿಡ ನೆಡಿಸುವುದಲ್ಲ, ಖಾಲಿ ಇರುವ ಜಾಗದಲ್ಲಿ ಗಿಡ ನೆಡಿಸಬೇಕಿತ್ತು. ಜೊತೆಗೆ ನೆಟ್ಟ ಗಿಡಗಳಿಗೆ ನನ್ನ ಹೆಸರು, ಕೃಷ್ಣ ಬೈರೇಗೌಡರ ಹೆಸರು ಹಾಕಿದ್ದೀರಾ, ನಾವೇನು ಬಂದು ಈ ಗಿಡಗಳನ್ನು ನೋಡ್ಕೋತೀವಾ..? ಶಾಲಾ ಮಕ್ಕಳ ಹೆಸರುಗಳನ್ನು ಈ ಗಿಡಗಳಿಗಿಡಿ ಎಂದು ಹೇಳಿದ್ದರು.

 

Share Post