ಹೆಲಿಕಾಪ್ಟರ್ ಪತನ ಪ್ರಕರಣ; ಇರಾನ್ ಅಧ್ಯಕ್ಷ ಸೇರಿ ಎಲ್ಲರೂ ದುರ್ಮರಣ!
ಇರಾನ್; ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮೀರ್ ಸೇರಿ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.. ಹಿಮದಿಂದ ಆವೃತವಾಗಿರುವ ಪರ್ವತ ಪ್ರದೇಶದಲ್ಲಿ ಹವಾಮಾನ ವೈಪರಿತ್ಯದಿಂದ ಹೆಲಲಿಕಾಪ್ಟರ್ ಪತನವಾಗಿತ್ತು.. ಇದೀಗ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ..
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್ ಅಮೀರ್ ಜೀವಂತವಾಗಿದ್ದಾರೆ ಎಂಬ ಭರವಸೆ ಇಲ್ಲ ಎಂದು ಇರಾನ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ ಮತ್ತು ಧಾರ್ಮಿಕ ಮುಖಂಡ ಮೊಹಮ್ಮದ್ ಅಲಿ ಈ ಹೆಲಿಕಾಪ್ಟರ್ ನಲ್ಲಿದ್ದರು.. ಹೆಲಿಕಾಪ್ಟರ್ ಪತನವಾದ ಕೂಡಲೇ ಅದು ಸಂಪೂರ್ಣ ಬೆಂಕಿಗಾಹುತಿಯಾಗಿದೆ.. ಹೀಗಾಗಿ ಎಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ ನಿರ್ಮಿತ ಬೆಲ್ 212 ಹೆಲಿಕಾಪ್ಟರ್ ಇದಾಗಿದೆ..
ಹೆಲಿಕಾಪ್ಟರ್ ಪತನವಾದ ಮೇಲೆ ಸುಮಾರು 17 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿದೆ.. ಅನಂತರ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ತಲುಪಿದ್ದಾರೆ.. ಈ ವೇಳೆ ಹೆಲಿಕಾಪ್ಟರ್ ಸಂಪೂರ್ಣ ಸುಟ್ಟುಹೋಗಿರುವುದು ಗೊತ್ತಾಗಿದೆ.. 63 ವರ್ಷದ ಇಬ್ರಾಹಿಂ ರೈಸಿ 2021ರಲ್ಲಿ ಇರಾನ್‌ನ ಅಧ್ಯಕ್ಷರಾಗಿದ್ದು, ಇರಾನ್ ಮತ್ತು ಅಜೆರ್ಬೈಜಾನ್ ತಮ್ಮ ಸಂಬಂಧ ಸುಧಾರಿಸಲು ಅಜೆರ್ಬೈಜಾನ್‌ನಲ್ಲಿ ಸಾಮೂಹಿಕ ಅಣೆಕಟ್ಟನ್ನು ನಿರ್ಮಿಸುತ್ತಿವೆ. ಮೂರನೇ ಅಣೆಕಟ್ಟು ಉದ್ಘಾಟನೆಗೆ ಹೋಗಿದ್ದರು.. ಈ ವೇಳೆ ನಡೆದ ದುರಂತದಲ್ಲಿ ಸಾವನ್ನಪ್ಪಿದ್ದಾರೆ..