Bengaluru

ಕಲಾಪದಲ್ಲಿ ಚರ್ಚೆಗೆ ಅವಕಾಶ ಸಿಗದಿದ್ದಕ್ಕೆ ಜೆಡಿಎಸ್‌ ಖಂಡನೆ-ಕಲಾಪ ಮಾರ್ಚ್‌ 4ಕ್ಕೆ ಮುಂದೂಡಿಕೆ

ವಿಧಾನಸಭೆ: ಕಲಾಪ ಶುರುವಾದಾಗಿನಿಂದ ಕಾಂಗ್ರೆಸ್‌-ಬಿಜೆಪಿ ಜಿದ್ದಿಗೆ ನಾವು ಮೂಲೆಗುಂಪಾಗಿದ್ದೇವೆ. ನಮಗೆ ಚರ್ಚೆ ಮಾಡಲು ಒಂದೇ ಒಂದು ಅವಕಾಶ ಕೂಡ ಸಿಕ್ಕಿಲ್ಲ ಎಂದು ಜೆಡಿಎಸ್‌ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ರು. ಸಿಎಂ ಅವರು ಹೇಳಿದಂತೆ ಸರ್ಕಾರದ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ವಿರೋಧ ಪಕ್ಷ ಹೇಳಬೇಕು ಅದನ್ನು ಬಿಟ್ಟು ಹೀಗೆ ಪ್ರತಿಭಟನೆ ಮಾಡ್ತಿದಾರೆ ಅಂತಿದಾರೆ. ಅವರ ಕಾಣ್ತಿರೋದು ಕೇವಲ ಕಾಂಗ್ರೆಸ್‌ನವರು ಮಾತ್ರಾನಾ.. ನಾವು ಮೂವತ್ತು ಮಂದಿ ಶಾಸಕರಿದ್ದೇವೆ. ನಾವು ವಿರೋಧ ಪಕ್ಷದವರೇ, ಸರ್ಕಾರದೊಂದಿಗೆ ನಾವು  ಚರ್ಚೆ ಮಾಡ್ತೇವೆ. ನಮಗೆ ಅವಕಾಶ ಕೊಡಿ ಎಂದು ಬಂಡೆಪ್ಪ ಕಾಶೆಂಪೂರ್‌ ಆಕ್ರೋಶ ವ್ಯಕ್ತಿಪಡಿಸಿದ್ರು.

ಸದನ ಶುರುವಾದಾಗಿನಿಂದ ನಮಗೆ ಸಮಯ ನೀಡಿಲ್ಲ ಇದಕ್ಕೆ ನಮ್ಮ ಧಿಕ್ಕಾರ ಇದೆ ಎಂದು ಕಿಡಿಕಾರಿದ್ರು. ಈ ನಡುವೆ ಕಾಂಗ್ರೆಸ್‌ ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು ಮಾರ್ಚ್‌ 4ಕ್ಕೆ ಮುಂದೂಡಿಕೆ ಮಾಡಿದ್ರು. ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸದನವನ್ನು ಮುಂದಿನ ತಿಂಗಳಿಗೆ ಮುಂದೂಡಿದ್ರು.

Share Post