Bengaluru

ಇಂದು ರಾತ್ರಿ 8 ರಿಂದಲೇ ಕರುನಾಡು ಲಾಕ್

ಬೆಂಗಳೂರು : ಕೋವಿಡ್‌ ಪ್ರಕರಣಗಳನ್ನು ಹತೋಟಿಯಲ್ಲಿಡಲು ಸರ್ಕಾರ ಎರಡು ವಾರಗಳ ಕಾಲ ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ ಹೇರಿದೆ. ಇಂದು ರಾತ್ರಿ 8ರಿಂದಲೇ ವೀಕೆಂಡ್‌ ಕರ್ಫ್ಯೂ ಜಾರಿಯಾಗುತ್ತಿದ್ದು ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಜಾರಿಯಲ್ಲಿ ಇರಲಿದೆ.

ಇಂದು ರಾತ್ರಿ ೮ರ ಒಳಗೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಮುಗಿಸಿ ಬಾಗಿಲು ಹಾಕಲು ಸರ್ಕಾರ ಸೂಚಿಸಿದೆ. ಅಗತ್ಯ ಸೇವೆಗಳಾದ ಹಾಲು, ಹಣ್ಣು,ತರಕಾರಿ, ಆಸ್ಪತ್ರೆ ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸೇವೆಗಳು ಇಂದು ರಾತ್ರಿಯಿಂದ ಸೋಮವಾರದವರೆಗೆ ಸ್ಥಗಿತಗೊಳ್ಳಲಿದೆ.

ತುರ್ತು ಸೇವೆಗಳಲ್ಲಿ ಕೆಲಸ ಮಾಡುವವರು, ಅಗತ್ಯ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಐಡಿ ಕಾರ್ಡ್‌ ತೋರಿಸಿ ಕೆಲಸಗಳಿಗೆ ತೆರಳಬಹುದಾಗಿದೆ. ಇನ್ನು ಮದ್ಯದ ಅಂಗಡಿ ತೆಗೆಯುವುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇಂದು ಸಂಜೆಯೊಳಗೆ ಮದ್ಯದ ಅಂಗಡಿ ತೆರೆಯಬೇಕೋ ಬೇಡವೋ ಎಂಬ ನಿರ್ಧಾರವನ್ನು ಸರ್ಕಾರ ತಿಳಿಸಲಿದೆ.

ಕಾರಣವಿಲ್ಲದೇ ಹೊರಗಡೆ ಬರುವವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ವೀಕೆಂಡ್‌ ಕರ್ಫ್ಯೂ ಸಮಯದಲ್ಲಿ ಚಿತ್ರಮಂದಿರಗಳು, ಮಾಲ್‌ಗಳು, ಈಜು ಕೊಳಗಳು, ಜಿಮ್‌, ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗಳು, ಸಾರ್ವಜನಿಕ ಗ್ರಂಥಾಲಯಗಳು, ಬ್ಯೂಟಿ ಪಾರ್ಲರ್‌ಗಳು, ಸಲೂನ್‌ ಶಾಪ್‌ ಸೇವೆಯೂ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

 

 

Share Post