ಬಸವತತ್ವಕ್ಕೆ ಅಪಚಾರ ಮಾಡುವುದಿಲ್ಲ; ಸದಾನಂದಗೌಡ
ಬೆಂಗಳೂರು; ಸಾಮಾಜಿಕ ವ್ಯವಸ್ಥೆ ಕುಸಿಯುತ್ತಿದೆ ಎಂಬುದನ್ನು ಅರಿಯದೆ ಕೆಲವರು ತಮ್ಮ ಆಡಳಿತ, ಕುರ್ಚಿ ಉಳಿಸಿಕೊಳ್ಳಲು ಏನೆಲ್ಲ ಮಾಡಬೇಕೊ ಅದನ್ನು ಮಾಡುತ್ತಿದ್ದಾರೆ ಎಂದು ಸಂಸದ ಡಿ.ವಿ.ಸದಾನಂದಗೌಡ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಎರಡನೇ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬಸವಣ್ಣನ ತತ್ವಕ್ಕೆ ನಾನು ಅಪಚಾರ ಮಾಡುವುದಿಲ್ಲ, ಇವನಾರವ, ಇವನಾರವ ಎಂದೆಣಿಸದೆ ಸಾಗಬೇಕಿದೆ ಎಂದರು.
ಇವತ್ತು ಸಮಾನತೆಯ ಬಗ್ಗೆ ಮಾತನಾಡುವವರು ನೈತಿಕತೆ ಉಳಿಸಿಕೊಂಡಿಲ್ಲ. ಅವರಿಗೆ ಆ ಹಕ್ಕೂ ಇಲ್ಲ. ಕೇವಲ ನೀತಿ ಕಥೆಗಳನ್ನು ಪ್ರಪಂಚಕ್ಕೆ ತೋರಿಸುತ್ತಿದ್ದಾರೆ. ನೀತಿಯ ಬೇರು ಕಾಯಕದ ಅಡಿಯಲ್ಲಿ ಇದೆ ಎಂಬುದನ್ನು ಮರೆತಿದ್ದಾರೆ ಎಂದು ವಿಷಾದಿಸಿದರು.