BengaluruCinemaHealth

ಹಿರಿಯ ಚಿತ್ರ ನಿರ್ದೇಶಕ ಭಗವಾನ್‌ ಇನ್ನಿಲ್ಲ

ಬೆಂಗಳೂರು; ಹಿರಿಯ ಚಿತ್ರ ನಿರ್ದೇಶಕ ಭಗವಾನ್ ಅವರು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ದೊರೈ ಹಾಗೂ ಭಗವಾನ್‌ ಜೋಡಿ ದೊಡ್ಡ ಖ್ಯಾತಿ ಗಳಿಸಿತ್ತು. ಇಬ್ಬರನ್ನೂ ಸೇರಿಸಿ ದೊರೈ ಭಗವಾನ್‌ ಎಂದೇ ಕರೆಯಲಾಗುತ್ತಿತ್ತು. ದೊರೈರಾಜ್‌ ಅವರು ಈಗಾಗಲೇ ದೂರವಾಗಿದ್ದು, ಇದೀಗ ಭಗವಾನ್‌ ಅವರು ಕೂಡಾ ಕೊನೆಯುಸಿರೆಳೆದಿದ್ದು ಚಿತ್ರರಂಗಕ್ಕೆ ಆದ ದೊಡ್ಡ ನಷ್ಟವಾಗಿದೆ.

ಭಘವಾನ್‌ ಅವರ ಪೂರ್ಣ ಹೆಸರು ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ಭಗವಾನ್. 1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿ ಭಗವಾನ್‌ ಅವ್ರು, ರಂಗಭೂಮಿ ಮೂಲಕ ಚಿತ್ರರಂಗಕ್ಕೆ ಬಂದವರು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

Share Post