BengaluruCinema

ತೆಲುಗಿಗೆ ಹಾರಿದ ಕನ್ನಡದ ʻಮಗಳು ಜಾನಕಿʼ

ಬೆಂಗಳೂರು; ಮಗಳು ಜಾನಕಿ ಧಾರಾವಾಹಿ ಮೂಲಕ ಬಣ್ಣ ಹಚ್ಚಿದ ಚಿಕ್ಕಮಗಳೂರು ಮೂಲದ ನಟಿ ಗಾನವಿ ಈಗ ಟಾಲಿವುಡ್‌ನತ್ತ ಹಾರಿದ್ದಾರೆ. ತೆಲುಗಿನ ಸ್ಟಾರ್ ನಟ ಜಗಪತಿ ಬಾಬು ಸಿನಿಮಾದಲ್ಲಿ ಆಶಿಶ್ ಗಾಂಧಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಗಾನವಿ ಜತೆಗೆ ಮಮತಾ ಮೋಹನ್ ದಾಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗಿನ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇಷ್ಟರಲ್ಲೇ ಚಿತ್ರ ಬಿಡುಗಡೆಯಾಗಲಿದೆ.

ಮೊದಲಿ ಕಿರುತೆರೆ ಮೂಲಕ ನಟನೆ ಶುರು ಮಾಡಿದ ಗಾನವಿ, ನಂತರ ಹೀರೋ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು. ಇದೀಗ ಶಿವರಾಜ್‌ಕುಮಾರ್ 125ನೇ ಸಿನಿಮಾ `ವೇದ’ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹರ್ಷ ನಿರ್ದೇಶನದ `ವೇದ’ ಚಿತ್ರ 1960ರ ದಶಕದ ಕಥೆ. ಶಿವರಾಜ್‌ಕುಮಾರ್ ಜೋಡಿಯಾಗಿ ಗಾನವಿ ಕಾಣಿಸಿಕೊಂಡಿದ್ದಾರೆ.

 

Share Post