ಕಾರಿನ ಮೇಲೆ ಉರುಳಿದ ಲಾರಿ; ತಾಯಿ, ಮಗಳು ಸಾವು
ಬೆಂಗಳೂರು: ಮೆಟ್ರೋ ಫಿಲ್ಲರ್ ಮುರಿದು ಬಿದ್ದು ತಾಯಿ ಮಗ ಸಾವನ್ನಪ್ಪಿದ ದುರಂತ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮೊತ್ತೊಂದು ದುರಂತ ಸಂಭವಿಸಿದೆ.
ಬನ್ನೇರುಘಟ್ಟ ಸಮೀಪದ ಬ್ಯಾಲಮರದ ದೊಡ್ಡಿ ಬಳಿ ಲಾರಿಯೊಂದು ನಿಯಂತ್ರಣ ತಪ್ಪಿ ಕಾರಿನಲ್ಲಿ ಮೇಲೆ ಬಿದ್ದು ತಾಯಿ ಮಗಳು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತರನ್ನು ಐಟಿ ಉದ್ಯೋಗಿ 47 ವರ್ಷದ ಗಾಯಿತ್ರಿ ಕುಮಾರ್ ಹಾಗೂ 16 ವರ್ಷದ ಸಮತಾ ಕುಮಾರ್ ಎಂದು ಗುರುತಿಸಲಾಗಿದೆ. ಮಗಳನ್ನು ಶಾಲೆಗೆ ಬಿಡಲು ಕಾರಿನಲ್ಲಿ ಬರುತ್ತಿದ್ದಾಗ ತಿರುವಿನಲ್ಲಿ ಅತಿವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ.
ಮೃತ ಗಾಯಿತ್ರಿ ಕುಮಾರ್ ತರಳು ನಿವಾಸಿ ಸುನೀಲ್ ಕುಮಾರ್ ಎಂಬುವರ ಪತ್ನಿಯಾಗಿದ್ದು ದಂಪತಿ 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಇನ್ನು ಕಾರು ಅಪಘಾತಕ್ಕೀಡಾಗಿದೆ ಎಂಬ ಸಂದೇಶ ಬರುತ್ತಿದ್ದಂತೆ ಸುನೀಲ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿದ್ದರು.
ಕಾಂಕ್ರಿಟ್ ಲಾರಿ ಆಗಿದ್ದರಿಂದ ಅದನ್ನು ತೆರವುಗೊಳಿಸಲು ನಾಲ್ಕು ಕ್ರೇನ್, ಒಂದು ಜೆಸಿಬಿ ಬಳಸಲಾಗಿದ್ದು ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯದಿಂದ ಸಾವನ್ನಪ್ಪಿದ್ದಾರೆ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ನಿತ್ಯ ಒಂದಲ್ಲ ಒಂದು ಕಾಮಗಾರಿಗಳು, ಯಂತ್ರಗಳು ಕಾರ್ಯನಿರ್ವಹಹಿಸುತ್ತಲೆ ಇರುತ್ತವೆ ಇಂತಹ ಕಾಮಗಾರಿಗಳನ್ನ ನಿರ್ವಹಿಸುವ ಇಂಜಿಯರ್ಗಳು, ಕಾರ್ಮಿಕರು, ವಾಹನಗಳ ಚಾಲಕರ ನಿರ್ಲಕ್ಷ್ಯಕ್ಕೆ ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸುವ ಜನರು ಬಲಿಯಾಗ್ತಲೇ ಇದ್ದಾರೆ.