BengaluruDistrictsHealth

Dasara Elephant; 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ತೀವ್ರ ಅಸ್ವಸ್ಥ

ಮೈಸೂರು; ದಸರಾ ಅಂಬಾರಿ ಎಂದಾಕ್ಷಣ ನೆನಪಾಗೋದು ಆನೆ ಬಲರಾಮ. ಇದು ಸುಮಾರು ಹದಿನಾಲ್ಕು ಬಾರಿ ಅಂಬಾರಿಯನ್ನು ಹೊತ್ತಿದೆ. ತುಂಬಾ ಸೌಮ್ಯ ಸ್ವಭಾದ ಬಲರಾಮ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಈ ಆನೆ ಈಗ ವಯೋಸಹಜನ ಕಾಯಿಲೆಯಿಂದ ಬಳಲುತ್ತಿದೆ. 67 ವರ್ಷ ಬಲರಾಮ ತೀವ್ರ ಅಸ್ವಸ್ಥಗೊಂಡಿದ್ದು, ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ.

ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಬಲರಾಮನಿಗೆ ಚಿಕಿತ್ಸೆ ನಡೆಯುತ್ತಿದೆ. ಬಲರಾಮನಿಗೆ ಟಿಬಿ ಇರಬಹುದು ಎಂದು ಪಶು ವೈದ್ಯರು ಶಂಕಿಸಿದ್ದು, ತಜ್ಞ ವೈದ್ಯರ ತಂಡವೇ ಸ್ಥಳದಲ್ಲಿದ್ದು ಚಿಕಿತ್ಸೆ ಮುಂದುವರೆಸಿದೆ. ಕಳೆದ ಹತ್ತು ದಿನಗಳಿಂದ ಬಲರಾಮ ಆಹಾರ ಸೇವಿಸಲಾಗದೆ ಒದ್ದಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಬಲರಾಮನ ಬಾಯಲ್ಲಿ ಹುಣ್ಣಾಗಿರುವುದರಿಂದ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಬಲರಾಮ ನಿತ್ರಾಣಗೊಂಡಿದ್ದಾನೆ. ನೀರು ಕೂಡಾ ಕುಡಿಯಲು ಸಾಧ್ಯವಾಗದಂತಹ ಪರಿಸ್ಥಿತಿ ಏರ್ಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.

ಪಶುವೈದ್ಯರಾದ ಡಾ.ರಮೇಶ್‌ ನೇತೃತ್ವದ ತಂಡ ಬಲರಾಮನ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

Share Post