BengaluruLifestyle

ಬೆಂಗಳೂರಿನಲ್ಲಿ ಡಬಲ್‌ ಡೆಕ್ಕರ್‌ ಫ್ಲೈಓವರ್‌ಗೆ ಪ್ರಯೋಗಿಕ ಚಾಲನೆ

ಬೆಂಗಳೂರು; ದಕ್ಷಿಣ ಭಾರತದ ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಬೆಂಗಳೂರಿನಲ್ಲಿ ನಿರ್ಮಾಣವಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಪ್ರಾಯೋಗಿಕ ಚಾಲನೆ ನೀಡಲಾಗುತ್ತಿದೆ.. ಟ್ರಾಫಿಕ್‌ ಸಮಸ್ಯೆ ನಿವಾರಣೆ ಮಾಡೋದಕ್ಕಾಗಿ ರಾಗಿಗುಡ್ಡ- ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಈ ಫ್ಲೈಓವರ್‌ ನಿರ್ಮಾಣ ಮಾಡಲಾಗಿದೆ.. ಇದರಲ್ಲಿ ಪ್ರಾಯೋಗಿಕವಾಗಿ ವಾಹನ ಸಂಚಾರವನ್ನು ಇಂದಿನಿಂದ ಶುರು ಮಾಡಲಾಗುತ್ತದೆ.. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಲಿದ್ದಾರೆ..

ಇದನ್ನೂ ಓದಿ; ತುಮಕೂರಿನಲ್ಲಿ ದಂತ ವೈದ್ಯನಿಂದ ಯುವತಿ ಮೇಲೆ ಅತ್ಯಾಚಾರ..?

ಸುಮಾರು 3.36 ಕಿಲೋ ಮೀಟರ್‌ ದೂರದ ಈ ಫ್ಲೈಓವರ್‌ ನಿರ್ಮಾಣಕ್ಕೆ 449 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.. ಇದರಿಂದಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.. ಈ ಡಬಲ್​​ ಡೆಕ್ಕರ್​ ಫ್ಲೈಒವರ್​​ನಲ್ಲಿ ಮೆಟ್ರೋ ರೈಲು ಒಂದು ಫ್ಲೈಓವರ್‌ನಲ್ಲಿ ಹಾದುಹೋದರೆ, ಮತ್ತೊಂದರಲ್ಲಿ ವಾಹನಗಳು ಸಂಚಾರ ನಡೆಸಲಿವೆ.

ಇದನ್ನೂ ಓದಿ; 7ನೇ ವೇತನ ಆಯೋಗ ಶಿಫಾರಸು ಜಾರಿ; ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

Share Post