Cinema

ಬಡವ ರಾಸ್ಕಲ್‌ ಸಿನಿಮಾ ತಂಡಕ್ಕೆ ಪ್ರಶಾಂತ್‌ ನೀಲ್‌ ಮೆಚ್ಚುಗೆ

ಕನ್ನಡದ ಬಡವ ರಾಸ್ಕಲ್‌ ಸಿನಿಮಾ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ವರ್ಷ ಡಾಲಿ ಧನಂಜಯ್‌ ಅವರು ಮುಟ್ಟಿದೆಲ್ಲವೂ ಚಿನ್ನವಾಗಿದೆ. ಸಲಗ, ರತ್ನನ್‌ ಪ್ರಪಂಚ ಮತ್ತು ಬಡವ ರಾಸ್ಕಲ್‌ ಮೂರು ಸಿನಿಮಾಗಳು ಹಿಟ್‌ ಆಗಿವೆ. ಧನಂಜಯ್‌ ಅವರ ವರ್ಚಸ್ಸು ಇನ್ನಷ್ಟು ಎತ್ತರಕ್ಕೆ ಏರಿದೆ.

ಬಡವ ರಾಸ್ಕಲ್’ ಚಿತ್ರದಲ್ಲಿ ರಂಗಾಯಣ ರಘು, ತಾರಾ, ನಾಗಭೂಷಣ ಮೊದಲಾದವರು ನಟಿಸಿದ್ದು, ಡಾಲಿ ಪಿಚ್ಚರ್ಸ್ ಬ್ಯಾನರ್​ನಲ್ಲಿ ಧನಂಜಯ್ ನಿರ್ಮಾಣ ಮಾಡಿದ್ದಾರೆ. ಪ್ರೀತಾ ಜಯರಾಮನ್ ಛಾಯಾಗ್ರಣ ಮಾಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ.

ಕಳೆದ ವಾರ ಮೈಸೂರಲ್ಲಿ ಸಿನಿಮಾ ನೋಡಿದ ಶಿವರಾಜ್‌ಕುಮಾರ್‌ ಅವರು ಧನಂಜಯ್‌ ಅವರನ್ನು ಹೊಗಳಿದ್ದರು. ಈಗ ಪ್ರಶಾಂತ್‌ ನೀಲ್‌ ಅವರು ಬಡವ ರಾಸ್ಕಲ್‌ ಚಿತ್ರತಂಡಕ್ಕೆ ಶುಭಾಷಯ ಕೋರಿದ್ದಾರೆ.

ಪ್ರಶಾಂತ್‌ ನೀಲ್‌ ತಮ್ಮ ಟ್ವಿಟರ್‌ ಖಾತೆಯ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 2021 ಸಾಕಷ್ಟು ಏರಿಳಿತಗಳಿಂದ ಕೂಡಿತ್ತು ಆದರೆ ನಮ್ಮದೇ ಸಿನಿಮಾ ಬಡವ ರಾಸ್ಕಲ್‌ ಸಾಕಷ್ಟು ಯಶಸ್ಸು ಗಳಿಸಿದೆ. ಇಡೀ ಚಿತ್ರತಂಡಕ್ಕೆ ಶುಭಾಷಯ ತಿಳಿಸಿದ್ದಾರೆ.

Share Post