Bengaluru

ಹೆಚ್ಚುತ್ತಿರುವ ಕೊರೊನಾ : ಇಂದು ತಜ್ಞರ ಜೊತೆ ಸಿಎಂ ಮಹತ್ವದ ಸಭೆ

ಬೆಂಗಳೂರು : ಕೊರೊನಾ ರೂಪಾಂತರಿ ಓಮಿಕ್ರಾನ್‌ ಮತ್ತು ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗುತ್ತಿವೆ. ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಸಾವಿರಕ್ಕೂ ಹೆಚ್ಚು ಕೇಸ್‌ ದಾಖಲಾಗುತ್ತಿದೆ. ಇದರಿಂದ ಎಲ್ಲರೂ ಆತಂಕಗೊಂಡಿದ್ದಾರೆ. ಕೊರೊನಾ ನಿಯಂತ್ರಿಸಲು ಕೆಲವು ಪ್ರಮುಖ ಕಾರಣಗಳನ್ನು ಅನುಸರಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಇಂದು ತಜ್ಞರ ಜೊತೆ ಮಹತ್ವದ ಸಭೆ ನಡೆಯಲಿದೆ.

ಬೆಂಗಳೂರನ್ನು ಈಗಾಗಲೇ ರೆಡ್‌ ಜೋನ್‌ ಎಂದು ಕೇಂದ್ರ ಪರಿಗಣಿಸಿದೆ. ನಿನ್ನೆ ಒಂದೇ ದಿನ ಬೆಂಗಳೂರು ಒಂದರಲ್ಲೇ ಸಾವಿರಕ್ಕೂ ಹೆಚ್ಚು ಕೇಸ್‌ ದಾಖಲಾಗಿದೆ. ಇದರಿಂದ ಬೆಂಗಳೂರಲ್ಲಿ ಪಾಸಿಟಿವಿಟಿ ರೇಟ್‌ ಶೇ 2ಕ್ಕಿಂತ ಹೆಚ್ಚಿದೆ.

ಕೋವಿಡ್‌ ದೃಢ ಪ್ರಮಾಣ ಶೇ 5ಕ್ಕಿಂತ ಹೆಚ್ಚಿದರೆ ಲಾಕ್‌ಡೌನ್‌ ಸೇರಿದಂತೆ ಕಠಿಣ ಕ್ರಮಗಳನ್ನು ಜರುಗಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಇನ್ನು ಬೆಂಗಳೂರು ಸೇರಿದಂತೆ ರೆಡ್‌ಜೋನ್‌ ವಲಯಗಳಲ್ಲಿ ಪ್ರತಿಯೊಬ್ಬರಿಗೂ ಡಬಲ್‌ ಡೋಸ್‌ ವ್ಯಾಕ್ಸಿನ್‌ ಕಡ್ಡಾಯಗೊಳಿಸಲು ಸೂಚಿಸಬಹುದಾಗಿದೆ. ಇನ್ನು ಸಾರ್ವಜನಿಕ ಸಭೆ ಸೇರಿದಂತೆ ಮುಂತಾದ ಕಾರ್ಯಕ್ರಮಗಳಿಗೆ ಬ್ರೇಕ್‌ ಹಾಕುವ ಸಾಧ್ಯತೆ ಇದೆ.

ತಜ್ಞರ ವರದಿ ಪ್ರಕಾರ ಜನವರಿ ಕೊನೆ ವಾರದಲ್ಲಿ ಕೊರೊನಾ ಮೂರನೇ ಅಲೆ ವೇಗವಾಗಿ ಹರಡಲು ಶುರುವಾಗಲಿದೆ. ಮಾರ್ಚ್‌ ತಿಂಗಳಲ್ಲಿ ದಿನವೊಂದಕ್ಕೆ 50 ಸಾವಿರಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇಂದು ಸಿಎಂ ತಜ್ಞರ ಜೊತೆ ಸಮಾಲೋಚನೆ ನಡೆಸಿ ಯಾವ್ಯವ ಕ್ರಮ ಕೈಗೊಳ್ಳಬಹುದೆಂದು ತೀರ್ಮಾನಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಇಂದು ಅವರ ನಿರ್ಧಾರ ಹೇಳದ ಪಕ್ಷದಲ್ಲಿ ಗುರುವಾರ ಕ್ಯಾಬಿನೆಟ್‌ನಲ್ಲಿ ವಿರೋಧ ಪಕ್ಷದವರೊಂದಿಗೆ ಮಾತನಾಡಿದ ನಂತರ ಕ್ರಮ ಜರುಗಿಸಲು ಮುಂದಾಗಬಹುದು. ಇಂದು ಸಂಜೆಯ ಸಭೆ ನಂತರ ಎಲ್ಲವೂ ತಿಳಿಯಲಿದೆ.

 

Share Post