Bengaluru

ಬೆಂಗಳೂರಲ್ಲಿ ಇಂದು 2 ಸಾವಿರ ಕೋವಿಡ್ ಕೇಸ್‌ ಬರುವ ಸಾಧ್ಯತೆ‌ ?

ಬೆಂಗಳೂರು : ಕೇಂದ್ರ ಸರ್ಕಾರ ಈಗಾಗಲೇ ಬೆಂಗಳೂರನ್ನು ರೆಡ್‌ಜೋನ್‌ ಎಂದು ಪರಿಗಣಿಸಿದೆ. ನಿನ್ನೆ ಬೆಂಗಳೂರಲ್ಲಿ 1049 ಕೇಸ್‌ ದಾಖಲಾಗಿದ್ದವು. ಇಂದು ಬೆಂಗಳೂರು ಒಂದರಲ್ಲೇ ಎರಡು ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಇಂದು ಎರಡು ಸಾವಿರ ಕೇಸ್‌ ಬಂದಲ್ಲಿ ನಿನ್ನೆಗಿಂತ ಇಂದು ಶೇ 100ರಷ್ಟು ಕೇಸ್‌ ಹೆಚ್ಚಾಗಲಿದೆ.

ಓಮಿಕ್ರಾನ್‌ ಸೋಂಕು ಸದ್ಯದ ಮಟ್ಟಕ್ಕೆ ಅಷ್ಟೇನು ವ್ಯಾಪಿಸಿಲ್ಲ ಆದರೆ ಡೆಲ್ಟಾ ಮತ್ತು ಕೋವಿಡ್‌ ಹರಡುವಿಕೆ ಹೆಚ್ಚಾಗಿದೆ. ಇದರಿಂದ ಮೂರನೇ ಅಲೆಯ ಭಯ ಜನರಲ್ಲಿ ಕಾಡಲು ಶುರುವಾಗಿದೆ.

ಕೋವಿಡ್ ಗಣನೀಯ ಏರಿಕೆ ಕಣುತ್ತಿರುವ ಹಿನ್ನೆಲೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ಕ್ರಮಗಳನ್ನು ಜರುಗಿಸಬಹುದು ಎಂದು ಹೇಳಲಾಗ್ತಿದೆ. ಪಾರ್ಕ್‌, ಪಬ್‌, ಜಿಮ್‌, ಸ್ವಿಮ್ಮಿಂಗ್‌ ಪೂಲ್‌ ಸೇರಿದಂತೆ ಸಾಕಷ್ಟು ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧ ಹೇರಬಹುದು.

ಶೇ5 ಕ್ಕಿಂತ ಹೆಚ್ಚು ಕೇಸ್‌ ದಾಖಲಾದರೆ ಸರ್ಕಾರ ಲಾಕ್‌ಡೌನ್‌ ಅಸ್ತ್ರ ಪ್ರಯೋಗಿಸಬಹುದು ಎನ್ನಲಾಗ್ತಿದೆ.

Share Post