BengaluruHealth

ಆಟ ಆಡುತ್ತಿದ್ದಾಗ ತಿಳಿಯದೇ ವಿಷ ಸೇವಿಸಿದ ಮೂವರು ಮಕ್ಕಳು..!

ಬೆಂಗಳೂರು ಗ್ರಾಮಾಂತರ; ಮನೆಯ ಮುಂದೆ ಆಟವಾಡುತ್ತಿದ್ದ ಮೂವರು ಮಕ್ಕಳು, ಪಾಕೆಟ್‌ ಒಂದರಲ್ಲಿದ್ದ ವಿಷವನ್ನು ಸಕ್ಕರೆ ಎಂದು ತಪ್ಪು ತಿಳಿದು ತಿಂದಿದ್ದರೂ. ಮೂವರು ಅಸ್ವಸ್ಥರಾಗಿದ್ದಾರೆ. ದೇವನಹಳ್ಳಿ ಪಟ್ಟಣದ ವಿನಾಯಕ ನಗರದಲ್ಲಿ ಈ ಘಟನೆ ನಡೆದಿದ್ದು, ಮೂವರೂ ಮಕ್ಕಳೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆ ಮುಂದಿನ ರಸ್ತೆಯಲ್ಲಿ ಮೂರು ವರ್ಷದ ಸುಚಿತ್ರಾ, ನಾಲ್ಕು ವರ್ಷ ಲೋಹಿತ್ಯಾ ಹಾಗೂ ಮೂರು ವರ್ಷದ ವೇದಾಂತ ಅವರು ಆಟವಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬದಿಯಲ್ಲಿ ಡ್ರೈನೇಜ್‌ ಕ್ಲೀನರ್‌ (D-Klog) ಎಂಬ ವಿಷದ ಪಾಕೆಟ್‌ ಸಿಕ್ಕಿದೆ. ಅದನ್ನು ಮಕ್ಕಳು ಸಕ್ಕರೆ ಎಂದು ತಪ್ಪು ತಿಳಿದು ಹಂಚಿಕೊಂಡು ತಿಂದಿದ್ದಾರೆ. ತಿನ್ನುತ್ತಿದ್ದಂತೆ ಅವರು ಅಸ್ವಸ್ಥರಾಗಿದ್ದಾರೆ. ಕೂಡಲೇ ಮಕ್ಕಳನ್ನು ದೇವನಹಳ್ಳಿಯ ಆಕಾಶ್‌ ಆಸ್ಪತ್ರೆಗೆ ಸೇರಿಸಲಾಯಿತು. ಸದ್ಯ ಮಕ್ಕಳ ಚೇತರಿಸಿಕೊಂಡಿವೆ ಎಂದು ತಿಳಿದುಬಂದಿದೆ.

ಪೋಷಕರು ಮಕ್ಕಳನ್ನು ಮನೆಯ ಬಿಟ್ಟು ಕೆಲಸಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

Share Post