BengaluruCrime

ಟೊಮ್ಯಾಟೋ ಇದ್ದ ವಾಹನವನ್ನೇ ಕದ್ದೊಯ್ದು ಕಳ್ಳರು..!

ಬೆಂಗಳೂರು; ಟೊಮ್ಯಾಟೊ ಬೆಲೆ ಕೆಜಿಗೆ 200 ರೂಪಾಯಿ ಮುಟ್ಟುತ್ತಿದೆ. ಬೆಲೆ ಜಾಸ್ತಿಯಾಗಿರುವುದರಿಂದ ಟೊಮ್ಯಾಟೋವನ್ನು ಕಳ್ಳರು ಕಳವು ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಕೆಲ ದಿನಗಳ ಹಿಂದೆ ರಾತ್ರಿ ವೇಳೆ ತೋಟವೊಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋವನ್ನು ಕಳವು ಮಾಡಲಾಗಿತ್ತು. ಇದೀಗ ರೈತರೊಬ್ಬರು ಮಾರುಕಟ್ಟೆಗೆ ತಂದಿದ್ದ ಟೊಮ್ಯಾಟೋ ತುಂಬಿದ್ದ ವಾಹನವನ್ನೇ ಕಳ್ಳರು ಕದ್ದೊಯ್ದಿದ್ದಾರೆ. 

ರೈತರೊಬ್ಬರು ಬೊಲೆರೋ ವಾಹನದಲ್ಲಿ ಸುಮಾರು 2 ಟನ್‌ ತೂಕದ ಟೊಮ್ಯಾಟೋವನ್ನು ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ಗೆ ತಂದಿದ್ದರು. ವಾಹನವನ್ನು ನಿಲ್ಲಿಸಿ ಟೀ ಕುಡಿಯಲು ಹೋದಾಗ ಕಳ್ಳರು ವಾಹನ ಸಮೇತ ಟೊಮ್ಯಾಟೋವನ್ನು ತೆಗೆದುಕೊಂಡು ಹೋಗಿದ್ದಾರೆ. ವಾಹನದಲ್ಲಿ 250ಕ್ಕೂ ಹೆಚ್ಚು ಟೊಮ್ಯಾಟೋ ಬಾಕ್ಸ್‌ಗಳು ಇದ್ದವು ಎಂದು ತಿಳಿದುಬಂದಿದೆ.

ಅಂದಹಾಗೆ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೊದಲು ಟೊಮ್ಯಾಟೋ ಇದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ನಂತರ ಆರ್‌ಎಂಸಿ ಯಾರ್ಡ್‌ ಬಳಿ ಬಂದು ಡ್ರೈವರ್‌ ಜೊತೆ ಖ್ಯಾತೆ ತೆಗೆದಿದ್ದಾರೆ. ಗಾಡಿ ಟಚ್‌ ಆಗಿದೆ ಎಂದು ಹೇಳಿ, ಅದಕ್ಕೆ ಹಣ ಕೊಡು ಎಂದು ಡ್ರೈವರ್‌ಗೆ ಆವಾಜ್‌ ಹಾಕಿದ್ದಾರೆ. ನಂತರ ಡ್ರೈವರ್‌ ಬಳಿಯಿಂದ ಬಲವಂತವಾಗಿ ಹಣ ಟ್ರಾನ್ಸ್‌ಫರ್‌ ಮಾಡಿಸಿಕೊಂಡಿದ್ದಾರೆ.  ಟೊಮೆಟೊ ಗಾಡಿಯಲ್ಲಿ ಕೂರಿಸಿಕೊಂಡು ಹೈಜಾಕ್ ಮಾಡಿದ್ದಾರೆ. ಚಿಕ್ಕಜಾಲ ಬಳಿ ಡ್ರೈವರ್‌ನ ಬಿಟ್ಟು ಟೊಮೆಟೊ ವಾಹನ ಸಮೇತ ಪರಾರಿಯಾಗಿದ್ದಾರೆ/

 

Share Post