BengaluruCrime

ಜ್ಯೂಸ್‌ ಕುಡಿಸಿ ಪ್ರಯಾಣಿಕರನ್ನು ದೋಚುತ್ತಿದ್ದ ಮಹಿಳೆ ಅರೆಸ್ಟ್‌!

ಬೆಂಗಳೂರು; ಒಂಟಿ ಪ್ರಯಾಣಿಕರನ್ನು ಗುರುತಿಸಿ ಅವರ ಸ್ನೇಹ ಬೆಳೆಸಿ, ಮತ್ತು ಬರಿಸುವ ಜ್ಯೂಸ್‌ ನೀಡಿ ಅವರನ್ನು ದೋಚುತ್ತಿದ್ದ ಕಳ್ಳಿಯೊಬ್ಬಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.. ಆಂಧ್ರಪ್ರದೇಶ ಮೂಲದ ಲತಾ ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ.. ಬ್ಯಾಟರಾಯನಪುರ ಪೊಲೀಸರು ಆರೋಪಿಯನ್ನು ಅರೆಸ್ಟ್‌ ಮಾಡಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ..
ಆರೋಪಿ ಮಹಿಳೆ ಬಿಎಂಟಿಸಿ ಬಸ್‌ನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪಕ್ಕ ಕುಳಿತುಕೊಳ್ಳುತ್ತಿದ್ದಳು.. ನಂತರ ಅವರನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸುತ್ತಿದ್ದಳು.. ಅನಂತರ ಅವರು ಇಳಿದ ಸ್ಥಳದಲ್ಲಿಯೇ ಇಳಿದು, ಜ್ಯೂಸ್‌ ಕುಡಿಯೋಣ ಬನ್ನಿ ಎಂದು ಬಲವಂತ ಮಾಡುತ್ತಿದ್ದಳು.. ಜ್ಯೂಸ್‌ ಕೊಡಿಸಿ, ಅದರಲ್ಲಿ ವ್ಯಕ್ತಿಗೆ ಗೊತ್ತಿಲ್ಲದಂತೆ ಮತ್ತು ಬರುವ ಔಷಧಿ ಅದರಲ್ಲಿ ಹಾಕುತ್ತಿದ್ದಳು.. ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಅವರ ಬಳಿ ಇದ್ದ ಮೊಬೈಲ್‌, ಪರ್ಸ್‌, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು..
ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿ ಬ್ಯಾಟರಾಯಪುರ ಠಾಣೆಗೆ ಕರೆತಂದಿದ್ದಾರೆ… ಈ ವೇಳೆ ಆರೋಪಿ ಮಹಿಳೆ ವಿಪಪೂರಿತ ಚಾಕೋಲೇಟ್‌ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.. ಆಕೆ ಕುಸಿದುಬಿದ್ದಿದ್ದು, ಅಸ್ವಸ್ಥಗೊಂಡ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

Share Post