CrimeDistricts

ಕಡೂರಿನ ಕಟಿಂಗ್‌ ಶಾಪ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ!

ಚಿಕ್ಕಮಗಳೂರು; ಕಟಿಂಗ್‌ ಶಾಪ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ.. ಆರೋಪಿಯನ್ನು ರೆಡ್‌ಹ್ಯಾಂಡಾಗಿ ಹಿಡಿಯಲಾಗಿದ್ದು, ಪೊಲೀಸರಿಗೆ ಒಪ್ಪಿಸಲಾಗಿದೆ.. ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಈ ಘಟನೆ ನಡೆದಿದೆ..
ಕಟಿಂಗ್‌ ಶಾಪ್‌ ಮಾಲೀಕ ರಾಜು ಎಂಬಾತನಿಂದಲೇ ಈ ಕೃತ್ಯ ನಡೆದಿದೆ.. ಬಾಲಕಿಯನ್ನು ಪುಸಲಾಯಿಸಿ ಕಟಿಂಗ್‌ ಶಾಪ್‌ ಒಳಗೆ ಕರೆದಿರುವ ಆರೋಪು ರಾಜು, ಅಲ್ಲೇ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ.. ಇದನ್ನು ನೋಡಿದ ಸಾರ್ವಜನಿಕರು ಆತನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.. ಅನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ..
ಇನ್ನು ಘಟನೆಯಿಂದಾಗಿ ಕಡೂರು ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು.. ರೊಚ್ಚಗೆದ್ದ ಸಾರ್ವಜನಿಕರು ಕಟಿಂಗ್‌ ಶಾಪ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.. ಈ ವೇಳೆ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಇನ್ನೊಂದೆಡೆ ಶಿವಮೊಗ್ಗ-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ.. ಇದರಿಂದಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ..

Share Post