ಇವಿ ಪ್ಲಸ್ ಬಸ್ ಸಾರ್ವಜನಿಕ ಸೇವೆ ಆರಂಭ
ಬೆಂಗಳೂರು; ಇಂದು ಕೆಎಸ್‌ಆರ್‌ಟಿಸಿ ಮೊದಲ ಎಲೆಕ್ಟ್ರಿಕ್ ಬಸ್‌ಗೆ ಚಾಲನೆ ನೀಡಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮೈಸೂರಿಗೆ ಇಂದು ಮೊದಲ ಇವಿ ಬಸ್ ಪ್ರಯಾಣ ಆರಂಭಿಸಿತು. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೂಗುಚ್ಚ ನೀಡಿ ಸ್ವಾಗತಿಸಿ, ಶುಭ ಕೋರಲಾಯಿತು ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರೀಯ ವಿಭಾಗ , ವಿಭಾಗೀಯ ನಿಯಂತ್ರಣಾಧಿಕಾರಿ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಪ್ರಯಾಣಿಕರನ್ನ ಕೆಎಸ್‍ಆರ್ ಟಿಸಿ ಸಿಬ್ಬಂದಿ ಸ್ವಾಗತಿಸಿದರು. ಬೆಳಗ್ಗೆ 6.45ಕ್ಕೆ ಬೆಂಗಳೂರಿನಿಂದ ಹೊರಟ ಬಸ್ ಬೆಳಗ್ಗೆ 8.45 ಕ್ಕೆ ಮೈಸೂರು ತಲುಪಿತು. ಈ ಬಸ್ ದರ ವೋಲ್ವೋ ಬಸ್‌ಗಿಂದ ಕಡಿಮೆ ಇದೆ. ವೋಲ್ವೋ ಬಸ್ ದರ ಮೆಜೆಸ್ಟಿಕ್ ನಿಂದ 350 ರೂಪಾಯಿ ಇದ್ದರೆ, ಈ ಬಸ್ ದರ 300 ರೂಪಾಯಿ ಇದೆ.