BengaluruPolitics

ಎಲ್ಲಾ ಸಚಿವರಿಗೂ ಸಿಗಲಿದೆ ಹೊಸ ಕಾರು; 33 ಕಾರು ಖರೀದಿಗೆ ರಾಜ್ಯ ಸರ್ಕಾರ ಹಣ ರಿಲೀಸ್‌

ಬೆಂಗಳೂರು; ಗ್ಯಾರೆಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಹಣ ವ್ಯಯಿಸುತ್ತಿರುವುದರಿಂದ ರಾಜ್ಯದಲ್ಲಿ ಇತರೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ನೂತನವಾಗಿ ಆಯ್ಕೆಯಾಗಿರುವ ಶಾಸಕರು, ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗದೇ ಪರದಾಡುತ್ತಿದ್ದಾರೆ. ಹೀಗಿರುವಾಗಲೇ ರಾಜ್ಯ ಸರ್ಕಾರ, ತನ್ನ ಸಂಪುಟದ ಎಲ್ಲಾ ಸಚಿವರಿಗೂ ಹಸೊ ಕಾರುಗಳನ್ನು ನೀಡಲು ಮುಂದಾಗಿದೆ. 33 ಸಚಿವರಿಗೆ ಹೊಸ ಇನ್ನೋವಾ ಹೈಕ್ರಾಸ್‌-ಹೈಬ್ರಿಡ್‌ ಎಂಪಿವಿ ಕಾರು ಖರೀದಿಗೆ ಮುಂದಾಗಿದ್ದು, ಅದಕ್ಕೆ ಖರ್ಚಾಗುವ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಈ ಕಾರೊಂದರ ಎಕ್ಸ್‌ ಶೋರೂಂ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ. ಒಟ್ಟು 33 ಕಾರುಗಳ ಖರೀದಿಗೆ ಮುಂದಾಗಿದ್ದು, ಇದಕ್ಕೆ ತಗಲುವ 9 ಕೋಟಿ 90 ಲಕ್ಷ ರೂಪಾಯಿ ಹಣವನ್ನು ಸರ್ಕಾರ ಬಿಡುಡಗೆ ಮಾಡಿದೆ. ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಪ್ರೈ.ಲಿ ಕಂಪನಿಯಿಂದ ನೇರವಾಗಿ ಕಾರು ಖರೀದಿಸಲಿದೆ.

 

Share Post