BengaluruCrime

ಬೇಕಂತಲೇ ಹಿಂದಿನಿಂದ ಯುವತಿಗೆ ಗುದ್ದಿದ ಕಾಮುಕ; ವಿಡಿಯೋದಲ್ಲಿ ಏನಿದೆ..?

ಬೆಂಗಳೂರು; ಬೆಂಗಳೂರಿನ ಪ್ರತಿಷ್ಠಿತ ಮಾಲ್‌ ಒಂದರಲ್ಲಿ ಕಾಮುಕನೊಬ್ಬ ಬೇಕಂತಲೇ ಯುವತಿಯೊಬ್ಬಳಿಗೆ ಹಿಂದಿನಿಂದ ಗುದ್ದಿ ವಿಕೃತ ಆನಂದ ಅನುಭವಿಸಿದ್ದಾನೆ. ಇದನ್ನು ಮಾಲ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿಕೊಂಡಿದ್ದು, ಆ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ನಿನ್ನೆ ಸಂಜೆ ಆರೂವರೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಗಳೂರಿನ ಪ್ರತಿಷ್ಠಿತ ಮಾಲ್‌ನಲ್ಲಿ ಯುವತಿಯೊಬ್ಬಳು ನಿಂತಿದ್ದರೆ, ಹಿಂದಿನಿಂದ ಬಂದ ಕಾಮುಕ ವ್ಯಕ್ತಿ ಆಕೆಯ ಸೊಂಟ ಹಿಡಿದು ಹಿಂದಿನಿಂದ ಗುದ್ದಿದ್ದಾನೆ. ಆದ್ರೆ ಈ ಬಗ್ಗೆ ಯಾರೂ ಇದುವರೆಗೂ ದೂರು ನೀಡಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿರುವುದರಿಂದ ಮಾಗಡಿ ರಸ್ತೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

 

 

Share Post