BengaluruCrime

ಪ್ರೀತಿಸಿದವಳ ಜೊತೆಯೇ ಆಯ್ತು ಎಂಗೇಜ್‌ಮೆಂಟ್‌; ಆದ್ರೆ ಮದುವೆಗೆ ಮುಂಚೆ ಆಕೆ ಓಡಿಹೋದ್ಲು..!

ಬೆಂಗಳೂರು; ಯುವಕನೊಬ್ಬ ಯುವತಿಯೊಬ್ಬಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆಕೆಯೂ ಈತನ ಪ್ರೀತಿಯ ಮೋಡಿಗೆ ಬಿದ್ದಿದ್ದಳು. ಇದು ಮನೆಗಳಲ್ಲಿ ಗೊತ್ತಾಗಿದ್ದೂ ಆಯ್ತು. ಒಪ್ಪಿ ಎಂಗೇಜ್‌ಮೆಂಟ್‌ ಆಗಿದ್ದೂ ಆಯ್ತು. ಇನ್ನೇನು ಮದುವೆ ಕೆಲವೇ ದಿನ ಬಾಕಿ ಇತ್ತು. ಹೀಗಿರುವಾಗಲೇ ಯುವತಿ ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆ. ಇತ್ತ ಯುವಕ ಮದುವೆ ಖರ್ಚಿಗೆ ಅಂತ ಭಾವಿ ಅತ್ತೆಗೆ 5 ಲಕ್ಷ ರೂಪಾಯಿ ಕೂಡಾ ಕೊಟ್ಟಿದ್ದಾನೆ. ಇತ್ತ ಹಣವೂ ಇಲ್ಲ, ಪ್ರೇಯಸಿಯೂ ಇಲ್ಲ ಅನ್ನೋ ಪರಿಸ್ಥಿತಿ ಆತನದ್ದು. ಈಗ ದಿಕ್ಕು ತೋಚದೆ ಆತ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ಈ ಘಟನೆ ನಡೆದಿರೋದು ಬೆಂಗಳೂರು ಹೊರವಲಯದಲ್ಲಿರುವ ಅವಲಹಳ್ಳಿಯಲ್ಲಿ. ಜೋಸೆಫ್‌ ಎಂಬ ಯುವಕ ಕ್ಯಾತ್ರಿನ್‌ ಎಂಬ ಯುವತಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಕ್ಯಾತ್ರಿನ್‌ ಕೂಡಾ ಜೋಸೆಫ್‌ನನ್ನು ಪ್ರೀತಿಸುತ್ತಿದ್ದಳು. ಇದಾದ ಮೇಲೆ ಮನೆಯವರೂ ಒಪ್ಪಿ ಮದುವೆ ಫಿಕ್ಸ್‌ ಮಾಡಿದ್ದರು. ಎರಡು ತಿಂಗಳಲ್ಲಿ ಮದುವೆ ಮಾಡಬೇಕಿತ್ತು. ಅಷ್ಟರಲ್ಲಿ ಕ್ಯಾತ್ರಿನ್‌ಗೆ ಬೇರೆ ಹುಡುಗನ ಜೊತೆ ಲವ್‌ ಆಗಿದ್ದು, ಆತನೊಂದಿಗೆ ಎಸ್ಕೇಪ್‌ ಆಗಿದ್ದಾಳಂತೆ. ಆತನ ಜೊತೆಯೂ ಮದುವೆಯೂ ಆಗಿದಾಳೆ ಎನ್ನಲಾಗಿದೆ.

ಇನ್ನು ಈ ವಿಷಯ ತಿಳಿದು ಜೋಸೆಫ್‌ ಕಂಗಾಲಾಗಿದ್ದಾನೆ. ಅಷ್ಟೇ ಅಲ್ಲ, ಭಾವಿ ಅತ್ತೆಗೆ ಸಾಲವಾಗಿ ಐದು ಲಕ್ಷ ರೂಪಾಯಿ ಕೊಟ್ಟಿದ್ದನಂತೆ. ಅದನ್ನು ಕೇಳಿದರೆ ನೀನ್ಯಾರೋ ನನಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾಳಂರೆ. ಹೀಗಾಗಿ ವಿಧಿಯುಲ್ಲದೆ ಜೋಸೆಫ್‌ ಅವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

Share Post