BengaluruCrime

8 ತಿಂಗಳಿಂದ ಉಗ್ರ ಬೆಂಗಳೂರಲ್ಲಿ ವಾಸ; ಸಿಕ್ಕಿಬಿದ್ದಿದ್ದು ಹೇಗೆ..?

ಬೆಂಗಳೂರು; ಕಾಶ್ಮೀರದಿಂದ ಪೊಲೀಸ್‌ ಪತ್ನಿಯೊಬ್ಬರನ್ನ ಪಟಾಯಿಸಿಕೊಂಡು ಬಂದು ಬೆಂಗಳೂರಿನಲ್ಲಿ ಎಂಟು ತಿಂಗಳಿಂದ ವಾಸ ಮಾಡುತ್ತಿದ್ದ ಉಗ್ರನನ್ನು ಕೊನೆಗೂ ಬಂಧಿಸಲಾಗಿದೆ. ಜಮ್ಮುವಿನ ಕಿಸ್ಟವಾರ್‌ ಪೊಲೀಸ್‌ ಠಾಣೆ ಪೊಲೀಸರು ಎಂಟು ದಿನಗಳ ಹಿಂದೆ ಬೆಂಗಳೂರಿಗೆ ಬಂದು ಆರೋಪಿಯನ್ನು ಬಂಧಿಸಿ, ಕರೆದೊಯ್ದಿದ್ದಾರೆ.

 

ಬಂಧಿತನನ್ನು ತಾಲಿಬ್‌ ಹುಸೇನ್‌ ಎಂದು ಗುರುತಿಸಲಾಗಿದೆ. ಈತ ತಾಲಿಕ್‌ ಎಂದು ಹೆಸರು ಬದಲಿಸಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದ ಎಂದು ಗೊತ್ತಾಗಿದೆ. ಓಕಳಿಪುರಂನ ಮಸೀದಿ ಮುಖ್ಯಸ್ಥ ಅನ್ವರ್‌ ಪಾಷಾ ಎಂಬುವವರು ಈತನಿಗೆ ಆಶ್ರಯ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಹೆಸರು ಬದಲಿಸಿಕೊಂಡು ಓಡಾಡುತ್ತಿದ್ದ ತಾಲಿಬ್‌,ಕಾಶ್ಮೀರದ ಪೊಲೀಸ್‌ ಪತ್ನಿಯನ್ನೇ ಪಟಾಯಿಸಿಕೊಂಡು ಬಂದಿದ್ದ ಎಂದು ಹೇಳಲಾಗಿದೆ. ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದನೆಂಬ ಆರೋಪದ ಮೇಲೆ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈತ ಹಿಜ್ಬುಲ್‌ ಮುಜಾಯಿದ್ದಿನ್‌ ಕಮಾಂಡರ್‌ ಆಗಿದ್ದ ಎನ್ನಲಾಗಿದೆ.

 

Share Post