ವ್ಯಾಪಾರಿ ಜುಗರಾಜ್ ಕೊಲೆ ಪ್ರಕರಣ; ನಾಲ್ವರ ಅರೆಸ್ಟ್, 8.75ಕೆಜಿ ಚಿನ್ನ ಜಪ್ತಿ..!
ಬೆಂಗಳೂರು; ಚಾಮರಾಜ ಪೇಟೆಯಲ್ಲಿ ಮೇ 25ರಂದು ನಡೆದಿದ್ದ ವ್ಯಾಪಾರಿ ಜುಗರಾಜ್ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಚಿನ್ನ ಹಾಗೂ ಹಣವನ್ನು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಬಿಜುರಾಮ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಜೊತೆ ಮಹೇಂದ್ರ ಪೊರಾನ್, ಓ ಪ್ರಕಾಶ್ ಎಂಬುವವರನ್ನು ಕೂಡಾ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಂಧಿತರಿಂದ ಬರೋಬ್ಬರಿ 8.75 ಕೆಜಿ ಚಿನ್ನ, 50 ಲಕ್ಷ ರೂಪಾಯಿ ನಗದು ಸೇರಿದಂತೆ ಹಲವು ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿ ಬಿಜುರಾಮ್ ಗುಜರಾತ್‌ಗೆ ಪರಾರಿಯಾಗಿದ್ದ. ಅಮೀರ್‌ಗಢ ಚೆಕ್‌ಪೋಸ್ಟ್ ನಲ್ಲಿ ತಪಾಸಣೆ ವೇಳೆ ಟ್ರಕ್ ಒಂದರಲ್ಲಿ ಅಡಗಿ ಕುಳಿತಿದ್ದ ಬಿಜುರಾಮ್ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿದ್ದ. ಅನಂತರ ಗುಜರಾತ್ ಪೊಲೀಸರು ಬೆಂಗಳೂರು ಪೊಲೀಸರುಗೆ ಮಾಹಿತಿ ನೀಡಿದ್ದರು. ಆರೋಪಿ ಬಿಜುರಾಮ್ ತಮ್ಮ ಹೆಂಡತಿ ಕಾಟ ತಾಳಲಾರದೆ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಆತ ಕೇವಲ ೧೫ ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ. ಆದರೆ ಆತನ ಹೆಂಡತಿ ಮತ್ತಷ್ಟು ಹಣ ತರುವಂತೆ ಪೀಡಿಸುತ್ತಿದ್ದಳಂತೆ. ಹೀಗಾಗಿ ಸ್ನೇಹಿತರ ಜೊತೆ ಸೇರಿ ಈ ದರೋಡೆ ಸ್ಕೆಚ್ ಹಾಕಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.