BengaluruCinema

ಕನ್ನಡ ಚಿತ್ರರಂಗದಲ್ಲಿ ಹಣ ತೊಡಗಿಸುತ್ತಿದ್ದಾರೆ ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು

ಬೆಂಗಳೂರು; ಕನ್ನಡ ಸಿನಿಮಾಗಳ ಬಗ್ಗೆ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಅಕ್ಕಪಕ್ಕದ ರಾಜ್ಯಗಳ ಸಿನಿಮಾ ಇಂಡಸ್ಟ್ರಿಗಳಿಗೆ ಅಸಡ್ಡೆ ಇತ್ತು. ಆದ್ರೆ ಈಗ ನಮ್ಮ ಚಿತ್ರರಂಗ ಅವರ ಮಟ್ಟಕ್ಕೆ ಅಥವಾ ಅದಕ್ಕಿಂತ ದೊಡ್ಡದಾಗಿ ಬೆಳೆದು ನಿಲ್ಲುತ್ತಿದೆ. ಹೀಗಾಗಿ ಅಕ್ಕಪಕ್ಕದ ರಾಜ್ಯಗಳ ಚಿತ್ರನಟರು, ಚಿತ್ರರಂಗದ ಗಣ್ಯರು ಕನ್ನಡ ಚಿತ್ರರಂಗದತ್ತ ಆಸಕ್ತಿಯಿಂದ ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಹೂಡಿಕೆ ಮಾಡೋದಕ್ಕೂ ಮುಂದೆ ಬರುತ್ತಿದ್ದಾರೆ. ಅದಕ್ಕೆ ಉದಾಹರಣೆ ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು.

ತೆಲುಗಿನ ಪ್ರಿನ್ಸ್‌ ಎಂದೇ ಖ್ಯಾತಿಯಾಗಿರುವ ಮಹೇಶ್‌ ಬಾಬು, ಆಂಧ್ರ ಹಾಗೂ ತೆಲಂಗಾಣದಲ್ಲಿ ಮಲ್ಟಿಫ್ಲೆಕ್ಸ್‌ಗಳಿಗೆ ಬಂಡವಾಳ ಹೂಡಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅವರು ಕನ್ನಡ ಸಿನಿಮಾ ಇಂಡಸ್ಟ್ರೀಗೆ ಕಾಲಿಡುತ್ತಿದ್ದಾರೆ. ಇಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಅವರ ಎಎಂಬಿ ಮಲ್ಟಿಫ್ಲೆಕ್ಸ್‌ಗಳು ಗಾಂಧಿನಗರದಲ್ಲಿ ಶುರುವಾಗಲಿವೆ. ಈ ಹಿಂದೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಐದು ಅಂತಸ್ತಿನ ಕಟ್ಟಡ ತಲೆ ಎತ್ತುತ್ತಿದೆ. ಈ ಕಟ್ಟಡದಲ್ಲಿ ಮಹೇಶ್‌ ಬಾಬು ಅವರ ಮಲ್ಪಿಫ್ಲೆಕ್ಸ್‌ಗಳು ತಲೆ ಎತ್ತಲಿವೆಯಂತೆ.

 

Share Post