ಆಟೋದಲ್ಲಿ ಕುಳಿತಿರುವಾಗಲೇ ಹೃದಯಾಘಾತ; ಚಾಲಕ ಸಾವು!
ಬೆಂಗಳೂರು; ಕೋವಿಡ್ ನಂತರದ ಅವಧಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ.. ವಯಸ್ಸಿನ ಲೆಕ್ಕವಿಲ್ಲದೆ ಎಲ್ಲಾ ವಯೋಮಾನದವರೂ ಕುಸಿದುಬಿದ್ದು ಸಾವನ್ನಪ್ಪುತ್ತಿದ್ದಾರೆ.. ಅದೂ ಕೂಡಾ ಕೆಲಸ ಮಾಡುತ್ತಿರುವಾಗಲೇ ಹೃದಯಾಘಾತಗಳು ಹೆಚ್ಚಾಗುತ್ತಿವೆ.. ಅದೇ ರೀತಿಯಲ್ಲಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಆಟೋದಲ್ಲಿ ಕುಳಿತಿರುವಾಗಲೇ ಪ್ರಾಣ ಬಿಟ್ಟಿದ್ದಾರೆ..
ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಈ ಘಟನೆ ನಡೆದಿದೆ.. ರಾತ್ರಿಯಿಡೀ ಆಟೋ ಓಡಿಸಿದ್ದ ಚಾಲಕ, ಒಂದು ಕಡೆ ಸೈಡ್‌ಗೆ ಆಟೋ ಹಾಕಿ ಅದರಲ್ಲೇ ಕುಳಿತಿದ್ದರು.. ಈ ವೇಳೆ ಹೃದಯಾಘಾತವಾಗಿ ಅಲ್ಲೇ ಸಾವನ್ನಪ್ಪಿದ್ದಾನೆ.. ಬೆಳಗ್ಗೆ ಕಸ ಗುಡಿಸಲು ಬಂದ ಪೌರ ಕಾರ್ಮಿಕರು, ಆಟೋ ಪಕ್ಕಕ್ಕೆ ಹಾಕುವಂತೆ ಹೇಳಿದ್ದಾರೆ.. ಆದ್ರೆ ಚಾಲಕ ಏನೂ ಮಾತನಾಡಿಲ್ಲ.. ಮಲಗಿರಬಹುದು ಎಂದು ಎಬ್ಬಿಸಲು ಹೋಗಿದ್ದಾರೆ.. ಆಗ ಸಾವನ್ನಪ್ಪಿರುವುದು ಗೊತ್ತಾಗಿದೆ.. ಕೂಡಲೇ ಪೌರಕಾರ್ಮಿಕರು ಕಲಾಸಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..