BengaluruCrime

ಕಾಪಿ ಹೊಡೆಯುತ್ತಿದ್ದ ಎಂದು ಶಿಕ್ಷಕಿ ಬುದ್ದಿವಾದ: ಡೆತ್‌ ನೋಟ್‌ ಬರೆದಿಟ್ಟು ವಿದ್ಯಾರ್ಥಿ ಸೂಸೈಡ್

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಬೈಯುವುದು ಕಾಮನ್.‌ ತಪ್ಪು ಮಾಡಿದ ವಿದ್ಯಾರ್ಥಿಯನ್ನು ತಿದ್ದಿ ತೀಡುವುದು ಪ್ರತಿಯೊಬ್ಬ ಶಿಕ್ಷಕನ ಜವಾಬ್ದಾರಿ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬೈಯ್ಯುವುದು, ಹೊಡೆಯುವುದು ಮಾಡಿದ್ರೆ ಅದು ಇನ್ನೊಂದು ರೂಪ ಪಡೆದುಕೊಳ್ಳುತ್ತಿದೆ. ಈ ಗಟನೆ ಕೂಡ ಅಂಥದ್ದೇ…

ಶಿಕ್ಷಕಿ ಬೈದರೆಂದು ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರ್.ಆರ್.‌ನಗರದಲ್ಲಿರುವ ರಾಣಿ ಸ್ವರ್ಗ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಧೀರಜ್‌ ನಿನ್ನೆ ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ಎಂಬ ಕಾರಣ್ಕಕೆ ಶಿಕ್ಷಕಿ ಬೈದಿದ್ದಾರೆ. ವಿದ್ಯಾರ್ಥಿಯನ್ನು ಪ್ರಿನ್ಸಿಪಾಲ್‌ ರೂಂಗೆ ಕರೆದೊಯ್ದೆ ಅವರ ಪೋಷಕರನ್ನು ಕರೆಸಿ ಅಪಾಲಜಿ ಲೆಟರ್‌ ಅನ್ನು ಬರೆಸಿದ್ದರಂತೆ. ಅದಾದ ಬಳಿಕ ಇತರೆ ವಿದ್ಯಾರ್ಥಿಗಳ ಮುಂದೆ ಧೀರಜ್‌ಗೆ ಅವಮಾನ ಮಾಡಿದ್ರಂತೆ.

ಈ ಅವಮಾನವನ್ನು ತಡೆಯಲಾಗದೆ ವಿದ್ಯಾರ್ಥಿ ಸಂಜೆ ಮನೆಗೆ ತೆರಳಿ ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಶಾಲೆ ಇತರೆ ವಿದ್ಯಾರ್ಥಿಗಳ ಪೋಷಕರು ಧರಣಿ ನಡೆಸುತ್ತಿದ್ದಾರೆ. ಅಸಲಿಗೆ ಸತ್ಯಾಂಶ ಏನು..? ವಿದ್ಯಾರ್ಥಿಗೆ ಸಾವಿಗೆ ನ್ಯಾಯ ಬೇಕು ಇದೆಲ್ಲ ಇತ್ಯರ್ಥ ಆಗಬೇಕೆಂದು ಪೋಷಕರು ಧರಣಿ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಧೀರಜ್‌ ಪೋಷಕರು ಬಂದಿಲ್ಲ. ಈ ವಿಚಾರದಲ್ಲಿ ನಾವು ಭಾಗಿಯಾಗಲ್ಲ ಎಂದು ಆರ್‌ ಆರ್‌ ನಗರ ಮನೆಯಲ್ಲೇ ಮಗನ ಮೃತದೇಹದ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.

ಅಸಲಿಗೆ ಆಗಿದ್ದೇನು..? ಇದರಲ್ಲಿ ಯಾರ ತಪ್ಪಿದೆ..? ಎಂಬುದನ್ನು ಪೊಲೀಸ್‌ ವಿಚಾರಣೆಯಲ್ಲಿ ಬಹಿರಂಗ ಆಗಬೇಕಿದೆ.

Share Post