Crime

ಕೊಡಗು ಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿಗೆ 105 ಮತಗಳಿಂದ ಗೆಲುವು

ಮಡಿಕೇರಿ: ಕೊಡಗು ವಿಧಾನಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು 105 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 1229 ಮತಗಳು ಚಲಾವಣೆಯಾಗಿದ್ದವು.

ಸುಜಾ ಕುಶಾಲಪ್ಪಗೆ ತೀವ್ರವಾಗಿ ಫೈಟ್‌ ನೀಡಿದ್ದ ಕಾಂಗ್ರೆಸ್‌ ನ ಮಂಥರ್‌ಗೌಡ ಸೋಲೊಪ್ಪಿಕೊಂಡಿದ್ದಾರೆ. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಸುಜಾ ಕುಶಾಲಪ್ಪ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

Share Post