ಇನ್ಸ್ಟಾಗ್ರಾಂ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಭೂಪ
ಗುಜರಾತ್: ಸೋಷಿಯಲ್ ಮೀಡಿಯಾ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಗುಜರಾತ್ನಲ್ಲಿ ನಡೆದಿದೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಮ್ರೆತ್ ತಾಲೂಕು ಪ್ರದೇಶದಲ್ಲಿ ನೆಲೆಸಿರುವ 27 ವರ್ಷದ ಮಹಿಳೆ ಸದ್ಯಕ್ಕೆ ಪೋಷಕರೊಂದಿಗೆ ವಾಸವಾಗಿದ್ದಾಳೆ. ನವೆಂಬರ್ 2019 ರಲ್ಲಿ, ಯುವತಿಯನ್ನು ಮಹಿಸಾಗರ್ ಜಿಲ್ಲೆಯ ದೇಬರ್ ಗ್ರಾಮದ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿತ್ತು. ಮದುವೆಯಾದ ಕೆಲ ದಿನಗಳ ನಂತರ, ಆಕೆಯನ್ನು ಮನೆಯಿಂದ ಹೊರಹಾಕಿದ್ದ ಪಾಫಿ ಪತಿ. ಬೇರೆ ದಿಕ್ಕಿಲ್ಲದೆ ಆ ಯುವತಿ ತವರು ಮನೆ ಬಂದು ಸೇರಿದ್ದಳು.
ಮನೆಯಿಂದ ಯುವತಿಯನ್ನು ಹೊಹಾಕುವಾಗ ತ್ರಿವಳಿ ತಲಾಖ್ ಹೇಳಿ ಆಚೆ ಹಾಕಿದ್ದನಂತೆ. ಈ ಬಗ್ಗೆ ಸಂಪೂರ್ಣ ಅರಿವಿಲ್ಲದ್ದರಿಂದ ಯುವತಿ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ. ನಂತರ ಪತಿಯ ಅನೈತಿಕ ಸಂಬಂಧದ ಬಗ್ಗೆ ತಿಳಿಯುವ ಪ್ರಯತ್ನದಲ್ಲಿ ಇನ್ಸ್ಟಾಗ್ರಾಂ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಪತಿಯೊಂದಿಗೆ ಸಂಪರ್ಕದಲ್ಲಿರಲು ಯತ್ನಿಸಿದ್ದಾಳೆ.ಈ ಖಾತೆ ತನ್ನ ಪತ್ನಿಯದ್ದೇ ಎಂಬುದನ್ನು ಅರಿತ ವ್ಯಕ್ತಿ ಇನ್ಸ್ಟಾಗ್ರಾಂನಲ್ಲೇ ತ್ರಿವಳಿ ತಲಾಖ್ ಹೇಳಿದ್ದಾನೆ.
ಈ ವಿಷಯವನ್ನು ಮನೆಯವರಿಗೆ ತಿಳಿಸಿ, ಪೋಷಕರೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆತನ ವಿರುದ್ಧ ದೂರು ದಾಖಲಾಗಿದ್ದು, ತ್ರಿವಳಿ ತಲಾಖ್ ದೂರಿನ ವಿಚಾರಣೆ ನಡೆಯುತ್ತಿದೆ ಎಂದು ಸಬ್ ಇನ್ಸ್ಪೆಕ್ಟರ್ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ.