ರಾಜ್ಯ ಬಜೆಟ್; ನೀರಾವರಿ ಯೋಜನೆಗಳಿಗೆ ಸಿಕ್ಕಿದ್ದೆಷ್ಟು..?
ಬೆಂಗಳೂರು; ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಹಲವು ನೀರಾವರಿ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಲಾಗಿದೆ. ಅದರ ವಿವರ ಈ ಕೆಳಕಂಡಂತಿದೆ.
ನೀರಾವರಿ ಯೋಜನೆಗಳಿಗೆ ಅನುದಾನ;
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 – 5 ಸಾವಿರ ಕೋಟಿ ರೂ.
ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ – 1 ಸಾವಿರ ಕೋಟಿ ರೂ.
ಭದ್ರಾ ಮೇಲ್ದಂಡೆ ಯೋಜನೆ – 3 ಸಾವಿರ ಕೋಟಿ ರೂ.
ಎತ್ತಿನಹೊಳೆ ಯೋಜನೆ – 3 ಸಾವಿರ ಕೋಟಿ ರೂ.
ಮೇಕೆದಾಟು ಯೋಜನೆ – 1 ಸಾವಿರ ಕೋಟಿ ರೂ.
ನವಲೆ ಬಳಿ ಜಲಾಶಯ ನಿರ್ಮಾಣ – 1 ಸಾವಿರ ಕೋಟಿ ರೂ.
ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿ – 500 ಕೋಟಿ ರೂ.
ಒಟ್ಟು ನೀರಾವರಿ ಯೋಜನೆಗಳಿಗೆ – 19 ಸಾವಿರ ಕೋಟಿ ರೂ. ಅನುದಾನ