BengaluruCrime

ಬೆಂಗಳೂರಲ್ಲಿ ಸಿನಿಮಾ ಸ್ಟೈಲ್‌ ಮರ್ಡರ್‌; ಕಾರು ಹತ್ತಿಸಿ ಯುವಕನ ಕೊಲೆ!

ಬೆಂಗಳೂರು; ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ಜೆಸಿ ನಗರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವಕನ ಮೇಲೆ ಸ್ಕಾರ್ಪಿಯೋ ವಾಹನ ಹತ್ತಿಸಿ ಕೊಲೆ ಮಾಡಲಾಗಿದೆ. 

ಅಸ್ಗರ್‌ ಎಂಬಾತನೇ ಕೊಲೆಯಾದ ಯುವಕ. ಅಕ್ಟೋಬರ್‌ 20ರಂದು ಈ ಕೊಲೆ ಮಾಡಲಾಗಿದೆ. ಅಮ್ರಿನ್‌ ಎಂಬಾತನಿಂದ ಈ ಕೃತ್ಯ ಎಸಗಲಾಗಿದೆ. ಹನ್ನೊಂದು ತಿಂಗಳ ನಂತರ ಈ ಕೊಲೆ ರಹಸ್ಯ ಬಯಲಾಗಿದ್ದು, ಸಿಸಿಟಿವಿಯಲ್ಲಿ ಕೊಲೆ ರಹಸ್ಯ ಬಯಲಾಗಿದೆ.

ಕೊಲೆಯಾದ ಅಸ್ಗರ್ ಹಾಗೂ ಆರೋಪಿ ಅಮ್ರಿನ್ ಇಬ್ಬರೂ ಪರಿಚಯಸ್ಥರಾಗಿದ್ದರು. ಅಸ್ಗರ್ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. ಆರೋಪಿ ಅಮ್ರಿನ್‌, ಅಸ್ಗರ್ ಬಳಿ ಸೆಕೆಂಡ್‌ ಹ್ಯಾಂಡ್‌ ಕಾರೊಂದನ್ನು ಖರೀದಿ ಮಾಡಿದ್ದ. ಈ ಕಾರಿನ ಹಣ ಅಂದರೆ ನಾಲ್ಕು ಲಕ್ಷ ರೂಪಾಯಿಗಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಇದು ತಾರಕಕ್ಕೇರಿದಾಗ ಆರೋಪಿ ಅಮ್ರಿನ್‌, ಅಸ್ಗರ್‌ ಮೇಲೆ ಹಲ್ಲೆ ಮಾಡಿದ್ದ.

ಈ ಸಂಬಂಧ ಕೊಲೆಯಾದ ಅಸ್ಗರ್, ಜೆಸಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ. ಹೀಗಾಗಿ ಜೆ.ಸಿ ನಗರ ಪೊಲೀಸರು ಆರೋಪಿ ವಿರುದ್ಧ 307 ಕೇಸ್ ಹಾಕಿದ್ದರು. ನಂತರ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಅಸ್ಗರ್‌ಗೆ ಆರೋಪಿ ಒತ್ತಡ ಹಾಕುತ್ತಿದ್ದ. ಇದೇ ವಿಚಾರವಾಗಿ ಫೋನ್ ಮಾಡಿ ಮಾತಾಡೋಣ ಅಂತಾ ಕರೆಸಿಕೊಂಡು ಕಾರು ಹರಿಸಿ ಕೊಲೆ ಮಾಡಿದ್ದಾನೆ.

 

Share Post