Bengaluru

ಈ ಬಾರಿ ಸಿಲಿಕಾನ್ ಸಿಟಿಯಲ್ಲಿ ಆರ್ಮಿ ಡೇ ಅಚರಣೆ

ಬೆಂಗಳೂರು; ಜನವರಿ 15 ಅಂದ್ರೆ ಭಾರತೀಯ ಸೇನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತೆ. 1949 ರ ಜನವರಿ 15 ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭಾರತೀಯ ಸೈನ್ಯದ ಪ್ರಧಮ ಪ್ರಧಾನ ದಂಡಾನಾಯಕರಾದ ದಿನ. ಹೀಗಾಗಿ ಅಂದಿನಿಂದ ಇಂದಿನ ವರೆಗೂ ಪ್ರತಿ ವರ್ಷ ಸೇನಾ ದಿನಾಚರಣೆಯನ್ನ ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಪ್ರತಿ ವರ್ಷ ದೆಹಲಿಯಲ್ಲಿ ನಡೆಯುತ್ತಿದ್ದ ಸೇನೆಯ ಆಕರ್ಷಕ ಮೆರವಣಿಗೆ ಹಾಗೂ ಮಿಲಿಟರಿ ಪ್ರದರ್ಶನ ಈ ಬಾರಿ ದೆಹಲಿ ಬದಲು ಬೆಂಗಳೂರಿನಲ್ಲಿ ನಡೆಯುತ್ತಿದೆ. ಹಲಸೂರಿನ ಎಂಇಜಿ ಮೈದಾನದಲ್ಲಿ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗ್ತಿವೆ.

ಇನ್ನು ಸೇನಾ ದಿನದ ಪೆರೇಡ್ ನಲ್ಲಿ 8 ರೆಜಿಮೆಂಟ್ ಗಳು ಪಥಸಂಚಲನ ನಡೆಸಲಿವೆ.., ಸೇನಾ ಹಬ್ಬ ಅಂತಾನೇ ಕರೆಸಿಕೊಳ್ಳೋ ಆರ್ಮಿ ಡೇ ದಿನವಾದ ಜನವರಿ 15 ರಂದು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ. ಅದಾದ ಬಳಿಕ ಸೈನ್ಯದ ಪಥ ಸಂಚಲದ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಪಥ ಸಂಚಲನದದಲ್ಲಿ ಭಾರತೀಯ ಸೈನ್ಯದ ಶೌರ್ಯ ಪ್ರದರ್ಶನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮಿಲಿಟರಿ ಬ್ಯಾಂಡ್‌ಗಳು, ಯುದ್ಧ ಸನ್ನದ್ಧತೆಗಳ ಕವಾಯತ್ತು ಇರಲಿದೆ.

ರುಧ್ರ & ಧ್ರುವ ಹೆಲಿಕಾಪ್ಟರ್.., K9 ವಜ್ರ ಸ್ವಯಂಚಾಲಿತ ಗನ್, ಪಿನಾಕ ರಾಕೆಟ್ , ತುಂಗುಸ್ಕಾ ಫೈಟರ್ ಜೆಟ್, 155mm ಹಾಗೂ 130 mm ಗನ್ ಪ್ರದರ್ಶನ ಕೂಡ ಇರಲಿದೆ. ಶೌರ್ಯ ಪ್ರದರ್ಶಿಸಿದ ಸೈನಿಕರಿಗೆ ಶೌರ್ಯ ಪದಕಗಳ ಪ್ರದಾನ, ಸೈನಿಕ ದಳ ಮತ್ತು ಸೈನಿಕರ ಸಾಹಸಕ್ಕೆ ಮೆಚ್ಚುಗೆ ಸೂಚಿಸಿ ಶ್ಲಾಘನೀಯ ಪದಕಗಳ ಪ್ರದಾನ ಜನವರಿ 13 ರಂದು ನಡೆಯಲಿದೆ.
ಕೆ.ಎಂ. ಕಾರ್ಯಪ್ಪ ಕರ್ನಾಟಕದವರೇ ಆಗಿದ್ದರಿಂದ ದೆಹಲಿ ಹೊರತು ಪಡಿಸಿ ಬೆಂಗಳೂರಿನಲ್ಲಿ ಮೊದಲ ಆರ್ಮಿ ಡೇ ಆಯೋಜನೆ ಮಾಡಲಾಗಿದೆ. ಹಲಸೂರಿನ ಎಂಇಜಿ ಮೈದಾನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಇಷ್ಟು ದಿನ ದೆಹಲಿಯಲ್ಲಿ ನಡೆಯುತ್ತಿದ್ದ ಆರ್ಮಿ ಡೇ ಕಣ್ತುಂಬಿಕೊಳ್ಳೋಕೆ ಸಾಧ್ಯವಾಗದವ್ರು ಈ ಬಾರಿ ಸಾಧ್ಯವಾಗಿಸಬಹುದಾಗಿದೆ

Share Post