BengaluruPolitics

Special Voting Booths; ಗಮನಸೆಳೆಯುತ್ತಿವೆ 264 ಸ್ಪೆಷಲ್‌ ಬೂತ್‌ಗಳು..!

ಬೆಂಗಳೂರು; ಇನ್ನೇನು ಕರ್ನಾಟಕದ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲ ಗಂಟೆಗಳು ಮಾತ್ರ ಬಾಕಿ ಇವೆ. ನಾಳೆ ಬೆಳಗ್ಗೆಯಿಂದ ಮತದಾನ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ಬೆಂಗಳೂರು ವ್ಯಾಪ್ತಿಯಲ್ಲಿ ಕೆಲ ಮತಗಟ್ಟೆಗಳು ಜನರ ಗಮನ ಸೆಳೆಯುತ್ತಿವೆ. ಯಾಕಂದ್ರೆ, ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ 264 ಥೀಮ್‌ ಆಧಾರಿತ ಮತಗಟ್ಟೆಗಳನ್ನು ಸಿದ್ಧತೆ ಮಾಡಲಾಗಿದೆ. ಆ ಮತಗಟ್ಟೆಗಳಲ್ಲಿ ವಿಶೇಷವಾದ ರೀತಿಯಲ್ಲಿ ಪೈಂಟಿಂಗ್‌ಗಳನ್ನು ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.

ಬೆಂಗಳೂರು ವ್ಯಾಪ್ತಿಯಲ್ಲಿ ಬರುವ 28 ಕ್ಷೇತ್ರಗಳ ವ್ಯಾಪ್ತಿಯಲ್ಲಿ 264 ಥೀಮ್‌ ಆಧರಿತ ಬೂತ್‌ಗಳನ್ನು ಮಾಡಲಾಗಿದೆ. ಇದರಲ್ಲಿ ಪಿಂಕ್ ಮತಗಟ್ಟೆಗಳು, ಯುವ ಮತಗಟ್ಟೆಗಳು ಮತ್ತು ಸಾಂಸ್ಕೃತಿಕ ಮತಗಟ್ಟೆಗಳು ಸೇರಿವೆ. ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನರಿಗಾಗಿಯೇ ಇರುವ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ ಕಾಳಜಿ ಬಿಂಬಿಸುವ ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕರಿಗಾಗಿ ಇರುವ ಮತಗಟ್ಟೆ, ತೃತೀಯ ಲಿಂಗಿಗಳಿಗಾಗಿಯೇ ಇರುವ ಮತಗಟ್ಟೆ, ಕ್ರೀಡಾ ಮತಗಟ್ಟೆಗಳೆಂಬ ವಿಶೇಷ ವಿನ್ಯಾಸದ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವು ಎಲ್ಲರ ಆಕರ್ಷಣೆಗೆ ಕಾರಣವಾಗಿವೆ.

 

ಇನ್ನು ರಾಜ್ಯದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಬಿಡಕಟ್ಟು ಜನರಿಗಾಗಿಯೇ 40 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ರಾಜ್ಯದ 9 ಜಿಲ್ಲೆಗಳ ಅರಣ್ಯದ ಅಂಚಿನಲ್ಲಿರುವ ಬುಡಕಟ್ಟು ಜನರಿಗಾಗಿ ಈ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

Share Post