Bengaluru

ನೆಲಮಂಗಲ ಬಳಿ ಎರಡನೇ ಏರ್‌ಪೋರ್ಟ್‌ಗೆ ಜಾಗ ನಿಗದಿ!

ಬೆಂಗಳೂರು; ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್‌ ನಿರ್ಮಾಣಕ್ಕೆ ಜಾಗ ಅಂತಿಮವಾಗಿದೆ.. ನೆಲಮಂಗಲ-ಕುಣಿಗಲ್‌ ನಡುವೆ ಏರ್‌ಪೋರ್ಟ್‌ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡಲಾಗಿದೆ.. ಈ ಮೂಲಕ ಸ್ಥಳ ಆಯ್ಕೆ ಗೊಂದಲ ನಿವಾರಣೆಯಾಗಿದೆ..
ನೆಲಮಂಗಲದಿಂದ ಸುಮಾರು 5 ಕಿಲೋ ಮೀಟರ್‌ ದೂರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಅಂತಿಮ ಮಾಡಲಾಗಿದೆ.. ಇದಕ್ಕೆ ಸುಮಾರು 4-5 ಸಾವಿರ ಎಕರೆ ಭೂಮಿ ಬೇಕಾಗಿದ್ದು, 6-7 ಸ್ಥಳಗಳನ್ನು ಗುರುತಿಸಲಾಗಿತ್ತು.. ಇದರಲ್ಲಿ ನೆಲಮಂಗಲ ಆಯ್ಕೆ ಮಾಡಲಾಗಿದೆ.. KIALಗೆ 2ನೇ ವಿಮಾನ ನಿಲ್ದಾಣ ನಿರ್ಮಾಣದ ವಿಚಾರವಾಗಿ ನಡೆದ 11ನೇ ಸಭೆಯಲ್ಲಿ ಈ ಸ್ಥಳ ಆಯ್ಕೆ ಮಾಡಲಾಗಿದೆ.

Share Post