ಈ ವರ್ಷದಲ್ಲೇ ಏಳನೇ ವೇತನ ಅನುಷ್ಠಾನ; ಸಿಎಂ ಬೊಮ್ಮಾಯಿ ಸ್ಪಷ್ಟನೆ
ಬೆಂಗಳೂರು; ಸರ್ಕಾರಿ ನೌಕರರಿಗೆ ಇದೇ ವರ್ಷದಲ್ಲಿ ಏಳನೇ ವೇತನ ಅನುಷ್ಠಾನಗೊಳಿಸುವ ಉದ್ದೇಶ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ಬಜೆಟ್ ಬುಕ್‌ನಲ್ಲೇ ಹೇಳೋದಕ್ಕೆ ಆಗೋದಿಲ್ಲ. ಏಳನೇ ವೇತನ ಆಯೋಗದ ವರದಿ ಜಾರಿ ಮಾಡೋದಕ್ಕೆ ನಮ್ಮ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ಸುಧಾಕರರಾವ್ ಕಮಿಟಿಯಿಂದ ವರದಿ ಕೇಳಿದ್ದೇವೆ. ಈ ವರ್ಷದಲ್ಲಿ ಏಳನೇ ವೇತನವನ್ನು ಜಾರಿ ಮಾಡಲು ಮುಂದಾಗಿದ್ದೇವೆ ಸಿಎಂ ಇದೇ ವೇಳೆ ಹೇಳಿದ್ದಾರೆ.