BengaluruCrime

ಡ್ರಗ್ಸ್‌ ಸೇವನೆ ಪ್ರಕರಣ; ಹಲಸೂರು ಠಾಣೆಗೆ ಹಾಜರಾದ ಸಿದ್ಧಾಂತ್‌ ಕಪೂರ್‌

ಬೆಂಗಳೂರು; ದಿ ಪಾರ್ಕ್‌ ಹೋಟೆಲ್‌ನಲ್ಲಿ ಡ್ರಗ್ಸ್‌ ಪಾರ್ಟಿ ಮಾಡಿ ಸಿಕ್ಕಿಬಿದ್ದಿದ್ದ ನಟ ಸಿದ್ಧಾಂತ್‌ ಕಪೂರ್‌ ಹಲಸೂರು ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ. ನಿನ್ನೆ ರಾತ್ರಿ ದಿ ಪಾರ್ಕ್‌ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪಾರ್ಟಿ ವೇಳೆ ಡ್ರಗ್ಸ್‌ ಸೇವಿಸಿ ಸಿದ್ಧಾಂತ್‌ ಕಪೂರ್‌ ಸಿಕ್ಕಿಬಿದ್ದಿದ್ದರು. ಆದ್ರೆ, ಕೋರ್ಟ್‌ನಿಂದ ಜಾಮೀನು ಪಡೆದು ಅವರು ನಿನ್ನೆಯೇ ಹೊರಬಂದಿದ್ದರು.

ಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಇಂದು ಹಲಸೂರು ಪೊಲೀಸ್‌ ಠಾಣೆಗೆ ಆಗಮಿಸಿದ ಸಿದ್ಧಾಂತ್‌ ಕಪೂರ್‌, ಪೊಲೀಸರ ವಿಚಾರಣೆ ಎದುರಿಸಿದರು. ನಿನ್ನೆ ರಾತ್ರಿ ನಡೆದ ಪಾರ್ಟಿಯಲ್ಲಿ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಇದರಲ್ಲಿ ಆರು ಮಂದಿ ಡ್ರಗ್ಸ್‌ ಸೇವಿಸಿದ್ದದ್ದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ಧಾಂತ್‌ ಕಪೂರ್‌ ಸೇರಿ ಐವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು.

Share Post