CrimeDistricts

DRDO ಯುವ ವಿಜ್ಞಾನಿ ಆತ್ಮಹತ್ಯೆ; ಆ ಕಾಲ್‌ಗೂ ಈ ಸಾವಿಗೂ ಸಂಬಂಧವಿದೆಯಾ..?

ಮಂಗಳೂರು; ಹೈದರಾಬಾದ್‌ನ DRDOನಲ್ಲಿ ಕೆಲಸ ಮಾಡುತ್ತಿದ್ದ ಯುವ ವಿಜ್ಞಾನಿಯೊಬ್ಬರು ಪುತ್ತೂರಿನ ಕಲ್ಲರ್ಪೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಪ್ಪತ್ಕಾಲ್ಕು ವರ್ಷದ ಭರತ್‌ ಕಲ್ಲರ್ಪೆ ಆತ್ಮಹತ್ಯೆ ಮಾಡಿಕೊಂಡಿ ಯುವ ವಿಜ್ಞಾನಿ. 

ಭರತ್‌ ಎರಡು ತಿಂಗಳ ಹಿಂದಷ್ಟೇ ಹೈದರಾಬಾದ್‌ನ ಡಿಆರ್‌ಡಿಒನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆದ್ರೆ ಅದೇನಾಗಿತ್ತೋ ಏನೋ ಆ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಆದ್ರೆ ಅದನ್ನು ಸಂಸ್ಥೆ ಸ್ವೀಕಾರ ಮಾಡಿರಲಿಲ್ಲ. ಆದರೂ ಭರತ್‌ ಸ್ವಗ್ರಾಮಕ್ಕೆ ಬಂದಿಲ್ಲ. ಕಳೆದ ರಾತ್ರಿ DRDO ಕಚೇರಿಯಿಂದ ಭರತ್‌ಗೆ ಫೋನ್‌ ಕರೆ ಬಂದಿದೆ.

ಅನಂತರ ಅದೇನಾಯ್ತೋ ಏನೋ ಇಂದು ಬೆಳಗ್ಗೆ ಭರತ್‌ ನೇಣಿಗೆ ಶರಣಾಗಿದ್ದಾನೆ. ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

 

Share Post