ಮಾರಿಕಣ್ಣು ಹೋರಿಮ್ಯಾಲೆ..ಸಿದ್ದರಾಮಯ್ಯನ ಕಣ್ಣು ಅಲ್ಪಸಂಖ್ಯಾತರ ಮೇಲೆ-ಅಶೋಕ್
ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಕಿಚ್ಚು ಹೊತ್ತಿ ಉರಿಯುತ್ತಿದೆ. ದಿನದಿಂದ ದಿನಕ್ಕೆ ಒಂದೊಂದೇ ಜಿಲ್ಲೆ, ಪ್ರದೇಶ, ಕಾಲೇಜುಗಳು ಪ್ರತಿಭಟನೆಗೆ ಸಾಕ್ಷಿಯಾಗುತ್ತಿದೆ ಕರುನಾಡು. ಈ ನಡುವೆ ಇದಕ್ಕೆಲ್ಲಾ ರಾಜಕೀಯ ಪಕ್ಷ ಮತ್ತು ರಾಜಕೀಯ ನಾಯಕರೇ ಕಾರಣ ಎಂದು ಬಿಜೆಪಿ, ಕಾಂಗ್ರೆಸ್ ನಾಯಕರು ಪರಸ್ಪರ ಕೆಸರೆರಚಾಟವನ್ನು ಶುರು ಮಾಡಿದ್ದಾರೆ. ಪರ ವಿರೋಧ ಚರಚೆಗೆ ಕಾರಣವಾಗಿ ಆರೋಪ ಪ್ರತ್ಯಾರೋಪ ನಡೆಯುತ್ತಿದೆ.
ಈ ನಡುವೆ ಸಿದ್ದರಾಮಯ್ಯ ಹಿಜಾಬ್ ಪರವಾಗಿ ನಿಂತಿದ್ದಾರೆ. ಮಕ್ಕಳು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದಾರೆ. ಇದೇನು ಹೊಸದೇನಲ್ಲ ಎಂದು ಸಿದ್ದರಾಮಯ್ಯ ವಾದ ಮಾಡ್ತಿದ್ದಾರೆ. ಅವರ ವಾದಕ್ಕೆ ಬಿಜೆಪಿ ನಾಯಕರು ಈಗಾಗಲೇ ಟಾಂಗ್ ಕೊಟ್ಟಿದ್ದಾರೆ. ಇಂದು ಸಚಿವ ಆರ್.ಅಶೋಕ್ ಕೂಡ ಸಿದ್ರಾಮಯದಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ಇದೇನು ಮೊದಲೇನಲ್ಲ. ಚಾಮುಂಡೇಶ್ವರಿಯಲ್ಲಿ ಸೋಲಾಯ್ತು..ಬಾದಾಮಿಯಲ್ಲೂ ಅವರಿಗೆ ಉಳಿಗಾಲವಿಲ್ಲ..ಈಗ ಚಾಮರಾಜಪೇಟೆ ಮೇಲಲೆ ಅವರ ಕಣ್ಣು ಬಿದ್ದಿದೆ.
ಅಲ್ಲಿ ಗೆಲುವು ಸಾಧಿಸಬೇಕಂದ್ರೆ ಇಂತಹದ್ದೊಂದು ಅನಾಹುತ ಮಾಡಿದರಷ್ಟೇ ಸಾಧ್ಯ ಅಂತ ಅವರಿಗೆ ಗೊತ್ತು ಅದಕ್ಕಾಗಿಯೇ ಅಲ್ಪಸಂಕ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಿದಾರೆ. ಮಾರಿ ಕಣ್ಣು ಹೋರಿ ಮ್ಯಾಲೆ ಅಂದಂಗೆ ಸಿದ್ದರಾಮಯ್ಯ ಕಣ್ಣಿ ಅಲ್ಪಸಂಖ್ಯಾತರ ಮೇಲೆ ಬಿದ್ದಿದೆ ಎಂದು ಕುಟುಕಿದ್ದಾರೆ.