ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಗೆ ಉದ್ಯೋಗಕ್ಕೆ ಸೂಚಿಸಿದ ಸಿದ್ದರಾಮಯ್ಯ
ಬೆಂಗಳೂರು; ಕಾಮಾಕ್ಷಿಪಾಳ್ಯದಲ್ಲಿ ಭಗ್ನಪ್ರೇಮಿಯಿಂದ ಆಸಿಡ್ ದಾಳಿಗೆ ತುತ್ತಾಗಿದ್ದ ಸ್ನಾತಕೋತ್ತರ ಪದವೀಧರೆ ಯುವತಿಗೆ ತಮ್ಮ ಸಚಿವಾಲಯದಲ್ಲಿ ಉದ್ಯೋಗ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸಂತ್ರಸ್ತೆ ಕೆಲಸ ಕೊಡಿಸುವಂತೆ ಮನವಿ ಮಾಡಿದರು. ಕೂಡಲೇ ಸ್ಪಂದಿಸಿದ ಸಿದ್ದರಾಮಯ್ಯ, ತಮ್ಮ ಸಚಿವಾಲಯದಲ್ಲಿ ಕೆಲಸ ಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
2022ರ ಏಪ್ರಿಲ್ 28 ರಂದು ಭಗ್ನಪ್ರೇಮಿಯೊಬ್ಬ ಯುವತಿ ಮೇಲೆ ಆಸಿಡ್ ಸುರಿದಿದ್ದ. ಯುವತಿ ಎಂಕಾಂ ಪದವೀಧರೆಯಾಗಿದ್ದಾಳೆ. ಹೀಗಾಗಿ ಕೆಲಸ ಕೇಳಿಕೊಂಡು ತಂದೆ-ತಾಯಿ ಜೊತೆ ಯುವತಿ ಸಿಎಂ ಭೇಟಿ ಮಾಡಲು ಬಂದಿದ್ದಳು. ಬೊಮ್ಮಾಯಿಯವರಿಗೆ ಕೆಲಸಕ್ಕಾಗಿ ಮನವಿ ಮಾಡಿದ್ದೆವು. ಆದ್ರೆ ಅವರು ಭರವಸೆ ಕೊಟ್ಟರೇ ವಿನಃ ಕೆಲಸ ಕೊಡಲಿಲ್ಲ ಎಂದು ಅಳಲು ತೋಡಿಕೊಂಡದರು. ಕೂಡಲೇ ಅವರು ಅಧಿಕಾರಿಗಳನ್ನು ಕರೆಸಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವಂತೆ ಸೂಚನೆ ಕೊಟ್ಟರು.