Bengaluru

ನಮ್ಮ ನೀರಿನ ಹಕ್ಕು ಪಡೆಯಲು ನಾವು ಸದಾ ಸಿದ್ಧ-ಸಿಎಂ ಬಸವರಾಜ್‌ ಬೊಮ್ಮಾಯಿ

ಬೆಂಗಳೂರು: ವಿಧಾನಸಭೆಯಲ್ಲು ಪ್ರತಿಧ್ವನಿಸಿದ ಮೇಕೆದಾಟು ಯೋಜನೆ ವಿಚಾರ ಅಧಿವೇಶನ ಮುಗಿಯುತ್ತಿದ್ದಂತೆ ನಾನು ದೆಹಲಿಗೆ ಹೋಗುತ್ತೇನೆ ಇನ್ನೊಂದು ರಾಜ್ಯದ ಅನುಮತಿ ಕೇಳೋದು ಸರಿಯಲ್ಲ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ರು. ತೆಲುಗು ಗಂಗಾ ಯೋಜನೆಗೆ 15ಟಿಎಂಸಿ ನೀರು ಕೊಟ್ಟಿದ್ದೇವೆ. ಮೇಕೆದಾಟು ಯೋಜನೆ ಪ್ರದೇಶ ಕರ್ನಾಟಕದಲ್ಲೇ ಬರುತ್ತದೆ ಈ ಯೋಜನೆಯಿಂದ ಸ್ವಲ್ಪ ಪ್ರದೇಶ ಮುಳುಗಡೆಯಾಗಬಹುದು. ಆದರೆ ಈ ಯೋಜನೆಯಿಂದ ಕುಡಿಯವ ನೀರು ಸಿಗಲಿದೆ ಎಂದರು.

ಮೇಕೆದಾಟಿನಿಂದ ಟ್ರಿಬ್ಯುನಲ್‌ ಆದೇಶ ಉಲ್ಲಂಘಟನೆಯಾಗುವುದಿಲ್ಲ ಕಳೆದ ಹಲವು ವರ್ಷಗಳಿಂದ ತಮಿಳುನಾಡಿಗೆ ನೀರು ಹಂಚಿಕೆ ಮಾಡುತ್ತಿದ್ದೇವೆ. ಹೆಚ್ಚುವರಿ ನೀರು ತಮಿಳುನಾಡಿಗೆ ಹೋಗುತ್ತಿದೆ. ಹೆಚ್ಚುವರಿ ನೀರನ್ನೂ ಕೂಡ ತಮಿಳುನಾಡು ಬಳಸಿಕೊಂಡು ಖ್ಯಾತೆ ತೆಗೆಯುತ್ತಿದೆ. ತಮಿಳುನಾಡು ಸರ್ಕಾರದ ವಾದವನ್ನು ವಿರೋಧಿಸಿದ್ದೇವೆ. ಪದೇಪದೇ ನಮ್ಮ ಮೇಕೆದಾಟು ಯೋಜನೆಗೆ ಅಡ್ಡಿ ಮಾಡುತ್ತಿದ್ದಾರೆ. ನಮ್ಮ ನೀರಿನ ಹಕ್ಕು ಪಡೆಯಲು ನಾವು ಸದಾ ಸಿದ್ಧ ಈ ಬಗ್ಗೆ ಯೋಜನೆ ವರದಿ ಕ್ಲಿಯರ್‌ ಆಗಬೇಕು. ತಮಿಳುನಾಡಿನ ನಿರ್ಣಯ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡ್ತಿದೆ. ನಾಳೆಯೇ ನಾವು ನಿರ್ಣಯ ತರುತ್ತೇವೆ ಇಂದು ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ರು.

Share Post