BengaluruCinema

ಕ್ರಾಂತಿ ಸಿನಿಮಾ ಪೋಸ್ಟರ್‌ ರಿಲೀಸ್‌; ದರ್ಶನ್‌ ಅಭಿಮಾನಿಗಳು ಫುಲ್‌ ಖುಷ್‌

ಬೆಂಗಳೂರು; ದೇಶಾದ್ಯಂತ ವರಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ದಿನದಂದೇ ಚಾಲೆಂಜಿಂಗ್​ ಸ್ಟಾರ್​ ದರ್ಶನ್‌ ಅಭಿನಯದ ಪ್ಯಾನ್ ಇಂಡಿಯಾ ಹೊಸ ಸಿನಿಮಾದ ಕ್ರಾಂತಿ ಚಿತ್ರದ ಮತ್ತೊಂದು ಪೋಸ್ಟರ್​ ರಿಲೀಸ್​ ಆಗಿದ್ದು, ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ದರ್ಶನ್ ಅಭಿನಯಿಸುತ್ತಿರುವ 55ನೇ ಚಿತ್ರ ಕ್ರಾಂತಿ ಆಗಿದ್ದು, ಈ ಸಿನಿಮಾಕ್ಕೆ ‘ಕ್ರಾಂತಿ’ ಎಂದು ಟೈಟಲ್​ ಇಡಲಾಗಿದೆ. ಸದ್ಯ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ದರ್ಶನ್‌ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಸ್ಕೆಟ್​ ಬಾಲ್​ ಹಿಡಿದು ನಡೆದುಕೊಂಡು ಬರುತ್ತಿರುವ ಚಿತ್ರದಲ್ಲಿ ಕಾಣ ಬಹುದಾಗಿದೆ.

ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಕ್ರಾಂತಿ ಚಿತ್ರಕ್ಕೆ ನೀವು ತೋರಿರುವ ಪ್ರೀತಿ – ಅಭಿಮಾನಕ್ಕೆ ನಾವು ಆಭಾರಿಯಾಗಿದ್ದೇವೆ. ನಮ್ಮ ಚಿತ್ರದ ಹೊಸ ಪೋಸ್ಟರ್ ನಿಮಗಾಗಿ ಎಂದು ದರ್ಶನ್​ ಟ್ವೀಟ್​ ಮಾಡಿದ್ದಾರೆ. ಪೋಸ್ಟರ್‌ ನೋಡಿದರೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಎಂದು ತಿಳಿಯುತ್ತದೆ.

Share Post