BengaluruCrimePolitics

ಗುತ್ತಿಗೆದಾರನ ಮನೆಯಲ್ಲಿ ಸಿಕ್ಕ 42 ಕೋಟಿ ತೆಲಂಗಾಣಕ್ಕೆ ಕಳುಹಿಸಲಾಗ್ತಿತ್ತಾ..?; ಏನಿದು ಆರೋಪ..?

ಹೈದರಾಬಾದ್‌; ಕಳೆದ ರಾತ್ರಿ ಬೆಂಗಳೂರು ಐಟಿ ದಾಳಿ ನಡೆದಿದ್ದು ಬೆಂಗಳೂರಿನ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ರೂಪಾಯಿ ಹಣ ಸಿಕ್ಕಿತ್ತು. ಈ ವಿಚಾರದಲ್ಲಿ ಕರ್ನಾಟಕದಲ್ಲಿ ದೊಡ್ಡ ಸುದ್ದು ಮಾಡಿದೆ. ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದ್ರೆ ಈ ಹಣದ ವಿಚಾರ ತೆಲಂಗಾಣದಲ್ಲೂ ಚರ್ಚೆಯಾಗುತ್ತಿದೆ. ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಪತ್ತೆಯಾದ 42 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್‌ ತೆಲಂಗಾಣಕ್ಕೆ ಸಾಗಿಸಿ, ಚುನಾವಣೆಯಲ್ಲಿ ಖರ್ಚು ಮಾಡಲು ಯೋಜಿಸಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಗ್ಗೆ ತೆಲಂಗಾಣ ಸಚಿವ ಹರೀಶ್‌ ರಾವ್‌ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಲ್ಲಿ ಪತ್ತೆಯಾದ 42 ಕೋಟಿ ರೂಪಾಯಿ ಹಣವನ್ನು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಳಕೆಗೆ ಕಾಂಗ್ರೆಸ್ ಪ್ಲ್ಯಾನ್ ಮಾಡಿತ್ತು. ಆ 42 ಕೋಟಿ ರೂಪಾಯಿಯನ್ನು ತೆಲಂಗಾಣಕ್ಕೆ ತಂದು ಚುನಾವಣೆಯಲ್ಲಿ ಬಳಸಲು ಗುತ್ತಿಗೆದಾರ ಯತ್ನಿಸುತ್ತಿದ್ದರು ಎಂದು ಹರೀಶ್‌ ರಾವ್‌ ಆರೋಪ ಮಾಡಿದ್ದಾರೆ. ಹೀಗಾಗಿ ಈ ವಿಚಾರ ದೊಡ್ಡ ಸದ್ದು ಮಾಡುತ್ತಿದೆ.

ಕರ್ನಾಟಕದಲ್ಲಿ ಈ ಮೊದಲು 40 ಪರ್ಸೆಂಡ್‌ ಕಮಿಷನ್ ಸರ್ಕಾರ ಇತ್ತು. ಈಗ 50 ಪರ್ಸೆಂಡ್‌ ಸರ್ಕಾರ ಬಂದಿದೆ ಎಂದು ಸಚಿವ ಹರೀಶ್‌ ರಾವ್‌ ಆರೋಪ ಮಾಡಿದ್ದಾರೆ. ಗುತ್ತಿಗೆದಾರ ಹಾಗೂ ಬಿಲ್ಡರ್‌ ಅಂಬಿಕಾಪತಿ ಅವರು ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಉಪಾಧ್ಯಕ್ಷರು. ಗೋಲ್ಡ್ ಮರ್ಚೆಂಟ್ ಅಸೋಸಿಯೇಷನ್, ಕಂಟ್ರ್ಯಾಕ್ಟರ್, ಬಿಲ್ಡರ್‌ಗಳಿಂದ ಹಣ ಸಂಗ್ರಹಿಸಿ ತೆಲಂಗಾಣಕ್ಕೆ ಕಳಿಸಲು ಯತ್ನಿಸಲಾಗಿದೆ ಎಂದೂ ಆರೋಪಿಸಲಾಗಿದೆ.

 

Share Post